ಲಾಕ್‌ಡೌನ್ ಎಫೆಕ್ಟ್: ಗೋಡೌನ್‍ನಲ್ಲಿ ಕೆಟ್ಟು ಹೋಯ್ತು 1,500 ಟನ್ ಆಹಾರ ಧಾನ್ಯ!

0
403

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.6: ಲಾಕ್‍ಡೌನ್ ಕಾಲದಲ್ಲಿ 1500 ಟನ್ ಆಹಾರ ಧಾನ್ಯಗಳು ಎಫ್‌ಸಿಐ ಗೋಡೌನ್‍ನಲ್ಲಿ ಕೆಟ್ಟು ನಾಶವಾಗಿದೆ. ದೇಶವ್ಯಾಪಿ ಲಾಕ್‍ಡೌನ್‍ನಿಂದಾಗಿ ವಲಸೆ ಕಾರ್ಮಿಕರು ಊರಿಗೆ ಹೊರಟವರಲ್ಲಿ ಕೆಲವರು ಹಸಿವಿನಿಂದ ಮೃತಪಟ್ಟಿದ್ದರು. ಇದೇವೇಳೆ, ಸರಕಾರದ ನಿರ್ಲಕ್ಷ್ಯದಿಂದಾಗಿ ಅಕ್ಕಿ, ಗೋಧಿಗಳು ನಾಶವಾಗಿದೆ. ಬಳಕೆದಾರ ಸಚಿವಾಲಯ ದತ್ತಾಂಶಗಳ ಪ್ರಕಾರ ಮೇ ತಿಂಗಳಲ್ಲಿ 26 ಟನ್ ಜೂನ್‍ನಲ್ಲಿ 1,453 ಟನ್ ಆಹಾರ ವಸ್ತುಗಳು ಬಳಕೆಗೆ ಅಯೋಗ್ಯ ಗೊಂಡಿದೆ.

ಜುಲೈ ಮತ್ತು ಆಗಸ್ಟ್‌ನಲ್ಲಿ 41ರಿಂದ 51 ಟನ್‍ವರೆಗೆ ಆಹಾರ ವಸ್ತುಗಳು ನಶಿಸಿವೆ. ಇದೇವೇಳೆ, ಮಾರ್ಚ್, ಎಪ್ರಿಲ್‍ಗಳಲ್ಲಿ ಆಹಾರ ವಸ್ತುಗಳು ನಾಶವಾಗಿಲ್ಲ ಎಂದು ಲೆಕ್ಕಗಳನ್ನು ಉದ್ಧರಿಸಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ. ಗೋಡೌನ್‍ಗಳಲ್ಲಿ ಒದ್ದೆಯಾಗದ ರೀತಿಯಲ್ಲಿ ಕೀಟಗಳ ಹಾವಳಿಯಾಗದಂತೆ ಆಹಾರಗಳನ್ನು ಸಂರಕ್ಷಿಸಿಡಿಲಾಗುತ್ತದೆ. ಆದರೂ ಪ್ರಾಕೃತಿಕ ವಿಕೋಪದ ಕಾರಣದಿಂದಾಗಿ ನಾಶವಾಗುವುಗಿದೆ. ಆಹಾರ ಧಾನ್ಯಗಳು ನಾಶವಾಗಿದ್ದರೆ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕ್ರಮ ಜರಗಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.