ಕೊರೋನ ವೈರಸ್ ತಯಾರಿಸಿದ್ದು ಚೀನ: ನಾನು ಕೊಲ್ಲಲ್ಪಡಬಹುದು ಆದರೆ ಸತ್ಯವೇ ಮುಖ್ಯ- ವೈರಲಾಜಿಸ್ಟ್ ಲಿಮೊಂಗ್

0
908

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಅ. 6: ಜಗತ್ತಿನಲ್ಲಿ ಲಕ್ಷಾಂತರ ಜನರಿಗೆ ಹರಡಲು ಮತ್ತು ಲಕ್ಷಾಂತರ ಜನರ ಸಾವಿಗೆ ಕಾರಣವಾದ ಹೊಸ ಕೊರೋನ ವೈರಸ್‌ಅನ್ನು ಚೀನದ ಲ್ಯಾಬಿನಲ್ಲಿ ಸೃಷ್ಟಿಸಲಾಗಿದೆ ಎಂಬ ವಾದವನ್ನು ಚೀನದ ವೈರಾಲಜಿಸ್ಟ್ ಡಾ.ಲಿಮೊಂಗ್ ಯಾನ್ ‘ದಿ ವೀಕ್‍’ಗೆ ನೀಡಿದ ಸಂದರ್ಶನದಲ್ಲಿ ಪುನರುಚ್ಚರಿಸಿದ್ದಾರೆ. ಸತ್ಯವನ್ನು ಅಡಗಿಸಿಡಲು ವಿಶ್ವ ಆರೋಗ್ಯ ಸಂಘಟನೆಯು ಯತ್ನಿಸಿತೆಂದು ಅವರು ಆರೋಪಿಸಿದರು.

ಹಾಕಾಂಗ್‍ನಿಂದ ಪಾರಾಗಿ ಅಮೆರಿಕ ತಲುಪಿದ ಲಿಮೊಂಗ್ ಈಗ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. ತಾನು ಯಾವಾಗ ಬೇಕಾದರೂ ಸಾಯಬಹುದು. ತಾನೆಂಬ ವ್ಯಕ್ತಿಯಲ್ಲ ಸತ್ಯವೇ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಕೊರೋನ ವೈರಸ್‍ಅನ್ನು ಮನುಷ್ಯನೇ ಸೃಷ್ಟಿಸಿದ್ದಾನೆ ಎಂದು ಜನವರಿ 19ಕ್ಕೆ ಯುಟ್ಯೂಬ್ ಚ್ಯಾನೆಲ್‍ನಲ್ಲಿ ನಾನು ಹೇಳಿದ್ದೇನೆ. ಆದರೆ ಸಮಾಜ, ಚೀನ ಸರಕಾರ, ವಿಶ್ವಾರೋಗ್ಯ ಸಂಘಟನೆ ನಿರಾಕರಿಸಲು ಶ್ರಮಿಸಿದೆ. ನಾನು ಹೇಳುವುದನ್ನು ಒಪ್ಪಲು ಪ್ರಮುಖ ವಿಜ್ಞಾನಿಗಳು ಮತ್ತು ಅಮೆರಿಕ ಸಿದ್ಧವಿದೆ ಎಂದು ಅವರು ಹೇಳಿದರು.

ವುಹಾನಿನಲ್ಲಿ ಕಂಡು ಬಂದ ಹೊಸ ರೀತಿಯ ನ್ಯೂಮೋನಿಯ ಕುರಿತ ಅಧ್ಯಯನಿಸುವ ತಂಡದಲ್ಲಿ ಲಿಮೊಂಗ್ ಯಾನ್ ಇದ್ದರು. ಅಧ್ಯಯನದಲ್ಲಿ ಇಂತಹ 40 ಕೇಸುಗಳಿವೆ ಎಂದು ಮನವರಿಕೆಯಾಯಿಉತ. ಈ ವಿಷಯ ಬಹಿರಂಗವಾಗದಂತೆ ನೋಡಿಕೊಳ್ಳುವ ಕೆಲಸವನ್ನು ಚೀನದ ಸರಕಾರ ಮಾಡಿತು. ವಿಶ್ವ ಆರೋಗ್ಯ ಸಂಘಟನೆಯ ನಿರ್ದೇಶಕ ಡಾ.ಟೆಡ್ರೋಸ್ ಅದಾನ್‍ರಿಗೂ ಹಾಕಾಂಗ್ ವಿಶ್ವವಿದ್ಯಾನಿಲಯದ ವೈರಾಲಜಿಸ್ಟ್ ಮಾಲಿಕ್ ಪೆಯ್‍ರಿಸ್‍ರಿಗೆ ಇದು ಗೊತ್ತಿದ್ದರೂ ಚೀನ ಸರಕಾರಕ್ಕೆ ನಿಕಟರಾದ ಕಾರಣ ಈ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದು ಲಿಮೊಂಗ್ ಯಾನ್ ಆರೋಪಿಸಿದರು.

ಹೆದರಿಕೆಯಿಂದ ತನ್ನ ಸಂಶೋಧನೆಯನ್ನು ಹಾಕಾಂಗ್ ವಿಶ್ವವಿದ್ಯಾನಿಲಯಕ್ಕೋ ಚೀನದ ಸರಕಾರಕ್ಕೂ ಹೇಳಿಲ್ಲ. ವೈರಸ್ ಕುರಿತು ಅಧ್ಯಯನಗಳನ್ನು ಚೀನ ಸರಕಾರ ತಡೆಹಿಡಿದಿದೆ. ಏನೇ ಆದರೂ ತಾನು ಸಂಶೋಧಿಸಿದ್ದನ್ನು ತಿದ್ದಲು ತಯಾರಿಲ್ಲ ಎಂದು ಲಿ ಮೊಂಗ್ ಯಾನ್ ಹೇಳಿದರು.