ತೆಲಂಗಾಣ,ಮೇ 16: ಕೋಟ್ಯಂತರ ರೂಪಾಯಿ ಠೇವಣಿ ಮೋಸವೆಸಗಿದ ಪ್ರಕರಣದಲ್ಲಿ ಹೈದರಾಬಾದಿನ ಹೀರಾ ಗ್ರೂಪ್ ಸಿಇಒ ನೌಹೀರಾ ಶೇಕ್ ಪುನಃ ಬಂಧನಕ್ಕೊಳಗಾಗಿದ್ದಾರೆ. ಇವರ ಜೊತೆಗೆ ಮೂಲತಃ ಕೇರಳದ ಎರ್ನಾಕುಳಂನವರಾದ ಇವರ ಪ್ರೈವೇಟ್ ಕಾರ್ಯದರ್ಶಿ ಮೋಳಿ ಥಾಮಸ್ ಹಾಗೂ ಮೋಳಿ ಥಾಮಸ್ರ ಪತಿ ಬಿಜು ಥಾಮಸ್ ಎಂಬಿಬ್ಬರನ್ನೂ ಬಂಧಿಸಲಾಗಿದೆ.
ಹೈದರಾಬಾದ್ ಮೆಟ್ರೊಪಾಲಿಟಿನ್ ಸೆಶನ್ಸ್ ಜಡ್ಜ್ ಮುಂದೆ ಹಾಜರು ಪಡಿಸಲಾಗಿದ್ದು ಮೂವರನ್ನು ಇಡಿಯ ಕಸ್ಟಡಿಗೆ ಬಿಟ್ಟು ಕೊಡಲಾಯಿತು.
ಈ ಹಿಂದೆ ಹೈದರಾಬಾದ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೇಸಿನಲ್ಲಿ ರಿಮಾಂಡಿನಲ್ಲಿ ಚಂಚಲಗುಡ ಜೈಲಿನಲ್ಲಿದ್ದ ನೌಹೀರಾ ಶೇಕ್ಗೆ ಇತ್ತೀಚೆಗೆ ಜಾಮೀನು ಸಿಕ್ಕಿತ್ತು. ಇದರ ಬೆನ್ನಿಗೆ ತೆಲಂಗಾಣದಲ್ಲಿ ದಾಖಲಾದ ಪ್ರಕರಣದಲ್ಲಿ ಎನ್ಫೋರ್ಸ್ಮೆಂಟ್(ಇಡಿ) ಬಂಧಿಸಿದೆ. ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಮೊದಲಾದ ರಾಜ್ಯಗಳಲ್ಲಿ ಮತ್ತು ಗಲ್ಫ್ನಲ್ಲಿ ಲಕ್ಷಾಂತರ ಮಂದಿ ಹೀರಾ ಗ್ರೂಪ್ನ ವಿವಿಧ ಸ್ಕೀಂನಲ್ಲಿ ಹಣ ತೊಡಗಿಸಿ ವಂಚನಕ್ಕೊಳಗಾಗಿದ್ದಾರೆ ಎನ್ನಲಾಗಿದೆ.












