ನಾನು ಐತಿಹಾಸಿಕ ಸತ್ಯವನ್ನು ಹೇಳಿದ್ದೇನೆ -ಕಮಲ್ ಹಾಸನ್

0
696

ಚೆನ್ನೈ,ಮೇ 16: ಸ್ವತಂತ್ರ ಭಾರತದ ಮೊದಲ ತೀವ್ರವಾದಿ ಹಿಂದೂ ಆಗಿದ್ದು, ಅದು ಮಹಾತ್ಮ ಗಾಂಧಿಯ ಕೊಲೆಮಾಡಿದ ನಾಥೂರಾಂ ಗೋಡ್ಸೆ ಎಂದು ತಾನು ಐತಿಹಾಸಿಕ ಸತ್ಯವನ್ನು ಹೇಳಿದ್ದೇನೆ ಎಂದು ಮಕ್ಕಳ ನೀತಿಮಯ್ಯಂ ಅಧ್ಯಕ್ಷ ಕಮಲ್ ಹಾಸನ್ ಹೇಳಿದರು. ಬುಧವಾರ ಸಂಜೆ ತಿರುಪ್ಪರಕುನ್ರಂ ವಿಧಾನಸಭಾ ಉಪಚುನಾವಣೆ ಪ್ರಚಾರದಲ್ಲಿ ತೊಪ್ಪೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತಾಡುತ್ತಿದ್ದರು.

ಕೆಲವೊಮ್ಮೆ ಐತಿಹಾಸಿಕ ಸತ್ಯಗಳು ಹೆಚ್ಚು ಕಹಿಯಾಗಿರುತ್ತವೆ. ಈ ಕಹಿ ಮದ್ದಾಗಿ ಬಿಡುತ್ತದೆ ಎಂಬ ನಿರೀಕ್ಷೆ ನನಗಿದೆ. ಅರವು ಕುರಿಚ್ಚಿಯಲ್ಲಿ ತಾನು ಸರಿಯಾಗಿದ್ದನ್ನೇ ಮಾತಾಡಿದ್ದೇನೆ. ಸರಿಯಾಗಿ ಕೇಳದವರು ಮತ್ತು ಅರ್ಥಮಾಡಿಕೊಳ್ಳದವರು ತಾನು ಗಲಭೆಗೆ ಬೀಜಹಾಕುತ್ತಿದ್ದೇನೆ ಎನ್ನುತ್ತಿದ್ದಾರೆ. ಇದು ನನ್ನ ಒಳಮನಸ್ಸಿಗೆ ತುಂಬ ನೋವು ಉಂಟು ಮಾಡಿದೆ. ನನ್ನ ಕುಟುಂಬದವರೆಲ್ಲರೂ ಹಿಂದೂಗಳು. ಯಾರನ್ನೂ ನೋಯಿಸುವ ರೀತಿಯಲ್ಲಿ ನಾನು ಮಾತಾಡುವುದಿಲ್ಲ. ಈ ಹೊರಿಸುವ ಆರೋಪ ಸತ್ಯವಾದುದಲ್ಲ. ನನ್ನ ವಿರುದ್ಧ ಕ್ರಮ ಜರಗಿಸಬೇಕೆಂದು ಕೇಸು ನೀಡಲಾಗಿದೆ. ಇದನ್ನು ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಕಮಲ್ ಹಾಸನ್ ಹೇಳಿದರು.

ಜಾತಿ-ಮತಗಳ ಭಾವನೆ ಕೆರಳಿಸುವ ಕೆಲಸ ಎಲ್ಲಿಯೂ ಯಶಸ್ವಿಯಾಗದು. ತೀವ್ರವಾದಿ ಎಂದು ಮಾತ್ರ ಹೇಳಿದ್ದೇನೆ. ಭಯೋತ್ಪಾದಕನೋ, ಕೊಲೆಗಡಕನೆಂದೋ ಹೇಳಿಲ್ಲ. ತಾನು ರಾಜಕೀಯದಲ್ಲಿ ತೀವ್ರವಾಗಿ ಕೆಲಸ ಮಾಡುತ್ತೇನೆ. ನನಗೆ ತೀವ್ರತೆ ಹೊಂದಿರುವ ಕಾರ್ಯಕರ್ತರು ಮತ್ತು ಅಭಿಮಾನಿಗಳಿದ್ದಾರೆ. ಅಪಮಾನಿಸಬೇಕೆಂದು ಭಾವಿಸಿ ನನ್ನ ಆಶಯಗಳ ವಿರುದ್ಧ ಹೋರಾಡಲು ನೋಡಿದರೆ ಸೋಲು ಪ್ರತಿಫಲವಾದೀತು.

ಜನರನ್ನು ಸಂಪರ್ಕಿಸುವುದನ್ನು ತಡೆಯವ ಯತ್ನ ಈಗ ನಡೆಯುತ್ತಿದೆ. ಇಂತಹ ಆಟಗಳು ನನ್ನೊಡನೆ ಬೇಡ. ಇದು ಆಪೇಕ್ಷಯಲ್ಲ, ಸಲಹೆಯಾಗಿದೆ. ಯಾವ ಜಾತಿ-ಮತಗಳನ್ನು ವಿಮರ್ಶಿಸುವ ಹಕ್ಕು ತನಗಿದೆ. ಅದನ್ನು ಇನ್ನು ಕೂಡ ಮುಂದುವರಿಸುವೆ ಎಂದು ಕಮಲ್ ಹಾಸನ್ ಹೇಳಿದರು.