ಹಿಜಾಬ್: ಈ ವಿರೋಧ ಬಾಹ್ಯಕ್ಕೆ ಕಂಡಷ್ಟು ಸರಳವಲ್ಲ

0
267

ಸನ್ಮಾರ್ಗ ಸಂಪಾದಕೀಯ

ಸಮವಸ್ತ್ರ ಒಂದು ನೆಪ. ನಿಜವಾದ ಕಾರಣ ಮತ್ಸರ ಮತ್ತು ದ್ವೇಷ. ಮುಸ್ಲಿಮ್ ಸಮುದಾಯದ ಬೆಳವಣಿಗೆಯನ್ನು ಸಹಿಸಲಾಗದ ಗುಂ ಪೊಂದು ವ್ಯವಸ್ಥಿತವಾಗಿ ಮತ್ತು ಸಂದರ್ಭಾನುಸಾರವಾಗಿ ವಿವಿಧ ನೆಪಗಳನ್ನು ಹುಟ್ಟು ಹಾಕುತ್ತಲೇ ಬಂದಿದೆ. ಆ ನೆಪಗಳ ಸುತ್ತ ಹಲವು ಸುಳ್ಳು ನರೇಟಿವ್‌ಗಳನ್ನು ಸೃಷ್ಟಿಸುತ್ತಲೂ ಬಂದಿದೆ. ಅಲ್ಲಾಹು ಅಕ್ಬರ್, ಮದ್ರಸ, ಕುರ್‌ಆನ್, ಬುರ್ಖಾ, ಗಡ್ಡ, ಪೈಜಾಮ, ಕುರ್ತಾ, ನಮಾಝ್, ಹಲಾಲ್ ಮುಂತಾದುವುಗಳೆಲ್ಲ ಈ ದೇಶಕ್ಕೆ 1400 ವರ್ಷಗಳಿಂದಲೂ ಚಿರಪರಿಚಿತ ಆಚರಣೆಗಳು ಮತ್ತು ಆರಾಧನೆಗಳು. ಆದರೆ 1947ಕ್ಕಿಂತ ಕೆಲವು ವರ್ಷ ಮೊದಲು ಮತ್ತು 47ರ ನಂತರ ದಿಢೀರ್ ಬೆಳವಣಿಗೆಗಳು ಗೋಚರಿಸತೊಡಗಿದುವು. ಮುಸ್ಲಿಮರನ್ನು ಕಟಕಟೆ ಯಲ್ಲಿ ನಿಲ್ಲಿಸುವುದು ಮತ್ತು ಅವರಲ್ಲಿ ಕೀಳರಿಮೆಯನ್ನು ಬೆಳೆಸುವ ಮಾತು-ಬರಹಗಳು ವ್ಯವಸ್ಥಿತವಾಗಿ ಕಾಣಿಸತೊಡಗಿದವು. ಭಾರತವನ್ನಾಳಿದ ಮುಸ್ಲಿಮ್ ದೊರೆಗಳನ್ನು ಮೊದಲು ಖಳನಾಯಕರನ್ನಾಗಿ ಬಿಂಬಿಸಲಾಯಿತು. ಹೊರದೇಶದಿಂದ ಭಾರತದ ಮೇಲೆ ದಂಡೆತ್ತಿ ಬಂದ ಮುಸ್ಲಿಮ್ ದೊರೆಗಳು ಇಲ್ಲಿನ ಮಂದಿರವನ್ನು ನಾಶಪಡಿಸಿದರು, ಸಂಪತ್ತನ್ನು ದೋಚಿದರು, ಮತಾಂತರ ಮಾಡಿದರು ಮತ್ತು ಹಿಂದೂಗಳನ್ನು ಅಡಿಯಾಳನ್ನಾಗಿ ಪರಿವರ್ತಿಸಿದರು ಎಂಬೆಲ್ಲ ವಾದಗಳು ಪುಂಖಾನುಪುಂಖವಾಗಿ ಕೇಳಿಸತೊಡಗಿದುವು. ಈ ವಾದಕ್ಕೆ ಪೂರಕವಾಗಿ ಬರಹಗಳೂ ಇತಿಹಾಸ ಕಥನಗಳೂ ಸೃಷ್ಟಿಯಾದವು. ಮುಹಮ್ಮದ್ ಘೋರಿ, ಬಾಬರ್, ಔರಂಗಜೇಬ್, ಟಿಪ್ಪು ಸುಲ್ತಾನ್, ತುಘಲಕ್… ಹೀಗೆ ಮುಸ್ಲಿಮ್ ದೊರೆಗಳ ಪಟ್ಟಿಯನ್ನೇ ತಯಾರಿಸಿ ಹರಿಬಿಡಲಾಯಿತು ಮತ್ತು ಮುಸ್ಲಿಮ್ ದೊರೆಗಳು ಎಂಬ ಪ್ರಸ್ತಾಪವಾದಾಗಲೆಲ್ಲ ಇವರನ್ನೇ ಸಾರ್ವಜನಿಕರು ತಮ್ಮ ಕಣ್ಣ ಮುಂದೆ ತಂದುಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸಲಾಯಿತು. ಮಾತ್ರವಲ್ಲ, ಮುಸ್ಲಿಮ್ ದೊರೆಗಳನ್ನೆಲ್ಲ ವಿದೇಶಿಯರು ಎಂಬಂತೆ ಕಟ್ಟಿ ಕೊಡಲಾಯಿತು. ನಿಜವಾಗಿ,

ಈ ನರೇಟಿವೇ ಸುಳ್ಳು. ಆರಂಭದ ಮುಸ್ಲಿಮ್ ದೊರೆಗಳನ್ನು ಬಿಟ್ಟರೆ ಉಳಿದವರೆಲ್ಲ ಇಲ್ಲೆ ಹುಟ್ಟಿ ಇಲ್ಲೆ ಬೆಳೆದವರು. ಇಲ್ಲಿಯ ಹಿಂದೂ ರಾಜರುಗಳ ಆಡಳಿತವನ್ನು ನೋಡಿಕೊಂಡೇ ಮುಸ್ಲಿಮ್ ರಾಜನ ಅರಮನೆಯಲ್ಲಿ ರಾಜಕುಮಾರ ಬೆಳೆಯುತ್ತಾನೆ. ಮುಸ್ಲಿಮ್ ರಾಜರುಗಳ ಅರಮನೆಯಲ್ಲಿ ಬಹುತೇಕ ಪ್ರಮುಖ ಸ್ಥಾನದಲ್ಲಿದ್ದುದು ಹಿಂದೂಗಳೇ. ಸೇನೆಯಲ್ಲಿದ್ದವರೂ ಹಿಂದೂಗಳೇ. ಯುದ್ಧಗಳು ನಡೆಯುತ್ತಿದ್ದುದು ಹೀಗೆಯೇ. ಇತಿಹಾಸದಲ್ಲಿ ನಡೆದಿರುವ ಯುದ್ಧಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿರುವುದು ನಾವುಗಳೇ ಹೊರತು ಆ ರಾಜರುಗಳ ಕಾಲದಲ್ಲಿ ಅವು ಬರೇ ಸಾಮ್ರಾಜ್ಯ ವಿಸ್ತರಣೆ ಗಳಷ್ಟೇ. ಮುಸ್ಲಿಮ್ ರಾಜನ ವಿರುದ್ಧ ಮುಸ್ಲಿಮ್ ರಾಜ ಯುದ್ಧ ಮಾಡಿದ್ದಾರೆ. ಸಾಯಿಸಿದ್ದಾರೆ. ದಕ್ಷಿಣ ಭಾರತದಲ್ಲೇ ಹೊಯ್ಸಳ, ಚಾಲುಕ್ಯ, ಚೋಳ, ಗಂಗ, ಪಾಂಡ್ಯ ಮುಂತಾದ ರಾಜವಂಶಗಳು ತಮ್ಮ ತಮ್ಮಲ್ಲೇ ಎಷ್ಟು ಯುದ್ಧಗಳನ್ನು ಮಾಡಿಲ್ಲ? ಎಷ್ಟು ಮಂದಿರಗಳನ್ನು ನಾಶಗೊಳಿಸಿಲ್ಲ? ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಸೋಲ ನುಭವಿಸುವುದಕ್ಕೆ ಮುಸ್ಲಿಮ್ ಸುಲ್ತಾನರ ಪಾತ್ರವೇನು ಚಿಕ್ಕದೇ? ಆದರೆ,

ಈ ದೇಶದ ಒಂದು ಗುಂಪು ಇತಿಹಾಸದ ಈ ಸತ್ಯಗಳನ್ನೆಲ್ಲ ಮರೆಮಾಚಿ ಮುಸ್ಲಿಮರನ್ನು ದಾಳಿ ಕೋರರು ಮತ್ತು ಹಿಂದೂಗಳನ್ನು ಸಂತ್ರಸ್ತರು ಎಂಬ ನೆಲೆಯಲ್ಲಿ ಬಿಂಬಿಸುತ್ತಾ ಹೋದುವು. ಮುಸ್ಲಿಮರ ಮೇಲೆ ಹಿಂದೂಗಳ ಅಸಹನೆ ಕೆರಳಲಿ ಎಂಬುದೇ ಇದರ ಹಿಂ ದಿರುವ ಹುನ್ನಾರ. ಜಾತಿ ವ್ಯವಸ್ಥೆ ಯಿಂದಾಗಿ ಹಿಂದೂ ಸಮುದಾಯದಲ್ಲಾಗಿರುವ ತೀವ್ರ ಬಿರುಕನ್ನು ಮರೆಮಾಚಿ ಗಮನ ಬೇರೆಡೆ ಸೆಳೆಯುವ ಉದ್ದೇಶವೂ ಇದರ ಹಿಂದಿತ್ತು. ಇದೊಂದೇ ಅಲ್ಲ. ಇದರ ಜೊತೆಜೊತೆಗೇ ಮುಸ್ಲಿಮ್ ಐಡೆಂಟಿಟಿಯನ್ನು ವಿದೇಶಿಯರು ಎಂಬಂತೆ ಮತ್ತು ಹಿಂದೂ ಧರ್ಮಕ್ಕೆ ಅಪಾಯಕಾರಿ ಎಂಬ ರೀತಿಯಲ್ಲಿ ಬಿಂಬಿಸುವ ಶ್ರಮಗಳೂ ನಡೆದುವು. ನಮಾಝ್‌ನ ಬಗ್ಗೆ, ಮದ್ರಸ, ಮಸೀದಿಗಳ ಬಗ್ಗೆ ಮತ್ತು ಮುಸ್ಲಿಮ್ ಸ್ತ್ರೀ-ಪುರುಷರ ವಸ್ತ್ರಧಾರಣೆಯ ಸುತ್ತ ಅಸಹ್ಯಕರ ಕತೆಗಳನ್ನು ಕಟ್ಟಲಾಯಿತು. ಹಿಂದೂಗಳು ಈ ವಸ್ತ್ರಧಾರಣೆಯನ್ನು ದ್ವೇಷಿಸತೊಡಗಿದರೆ ಸಾಮಾಜಿಕ ವಿಭಜನೆಯೊಂದಕ್ಕೆ ಸುಲಭ ವಾಗಿ ಅಡಿಪಾಯ ಹಾಕಬಹುದು ಎಂಬುದು ಅವರ ತಂತ್ರ. ಒಂದುಕಡೆ,

ಇತಿಹಾಸದ ಮುಸ್ಲಿಮ್ ದೊರೆಗಳನ್ನು ತೋರಿಸಿ ದ್ವೇಷವನ್ನು ಹುಟ್ಟುಹಾಕುವುದು ಮತ್ತು ಪ್ರಸಕ್ತ ಮುಸ್ಲಿಮ್ ರೀತಿ-ರಿವಾಜು, ಆಚರಣೆ, ಆರಾಧನೆಗಳನ್ನು ಎತ್ತಿ ತೋರಿಸಿ ಅಸಹ್ಯಕರ ವಾತಾವರಣವನ್ನು ಬೆಳೆಸುವುದನ್ನು ಯೋಜಿತವಾಗಿ ಮಾಡಲಾಯಿತು. ಮುಸ್ಲಿಮರ ಆರ್ಥಿಕ ಅಭಿವೃದ್ಧಿಯ ಬಗ್ಗೆ ಕಟು ಮತ್ಸರವೂ ಇದರ ಹಿಂದಿತ್ತು. ಈ ದೇಶದಲ್ಲಿ ನಡೆದ ಯಾವುದೇ ಕೋಮುಗಲಭೆಯಲ್ಲಿ ಅತ್ಯಂತ ಹೆಚ್ಚು ಆರ್ಥಿಕ ನಷ್ಟವನ್ನು ಎದುರಿಸಿರುವುದು ಮುಸ್ಲಿಮರೇ. ಮುಸ್ಲಿಮರನ್ನು ಗುರಿ ಮಾಡುವುದಕ್ಕಿಂತ ಎಷ್ಟೋ ಪಟ್ಟು ಅಧಿಕ ಅವರ ಸಂಸ್ಥೆ, ಕಾರ್ಖಾನೆ, ಅಂಗಡಿಗಳನ್ನು ಧ್ವಂಸ ಮಾಡಿದ ಮತ್ತು ದೋಚಿದ ಪ್ರಕರಣಗಳೇ ಹೆಚ್ಚು. ಇದು ಹಿಟ್ಲರನ ಜರ್ಮನಿಯಲ್ಲೂ ನಡೆದಿತ್ತು. ಐತಿಹಾಸಿಕವಾಗಿಯೇ ಯಹೂದಿ ಯರು ಧನಿಕರು. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲೂ ಯಹೂದಿಯರು ಬಡ್ಡಿ ವ್ಯವಹಾರ ಮಾಡುತ್ತಾ ಆರ್ಥಿಕವಾಗಿ ಧನಿಕರಾಗಿರುವ ವರದಿ ಇದೆ. ವಸುದೇಂದ್ರ ಅವರ ಇತಿಹಾಸ ಆಧಾರಿತ ‘ತೇಜೋ ತುಂಗಭದ್ರಾ’ ಕಾದಂಬರಿಯಲ್ಲೂ ಯಹೂದಿಯರು ಆರ್ಥಿಕವಾಗಿ ಬಲಿಷ್ಠರಾಗಿರುವ ಬಗ್ಗೆ ವಿಸ್ತೃತವಾಗಿ ಬರೆದಿರುವುದನ್ನು ಕಾಣಬಹುದು. ಹಿಟ್ಲರನ ಕಾಲದಲ್ಲೂ ಯಹೂದಿಯರು ಆರ್ಥಿಕವಾಗಿ ಬಲಾಢ್ಯರಾಗಿದ್ದರು. ಯಹೂದಿಯರ ವಿರುದ್ಧ ಜರ್ಮನಿಯ ಕ್ರೈಸ್ತರನ್ನು ಎತ್ತಿಕಟ್ಟುವಲ್ಲಿ ಹಿಟ್ಲರ್ ಯಶಸ್ವಿಯಾದುದರ ಹಿಂದೆ ಯಹೂದಿಯರ ಈ ಆರ್ಥಿಕ ಪಾರಮ್ಯಕ್ಕೂ ಪಾತ್ರವಿದೆ. ಜರ್ಮನ್ ಕ್ರೈಸ್ತರಲ್ಲಿ ಯಹೂದಿಯರ ಮೇಲೆ ಈ ಬಗ್ಗೆ ಮತ್ಸರವಿತ್ತು. ಆದ್ದರಿಂದಲೇ ಏಸುಕ್ರಿಸ್ತನನ್ನು ಕೊಂದವರು ಈ ಯಹೂದಿಗಳು ಎಂಬ ಹಿಟ್ಲರ್‌ನ ದ್ವೇಷ ಪ್ರಚಾರಕ್ಕೆ ಅವರು ಬಹಳ ಬೇಗ ಮರುಳಾದರು. ಇದಕ್ಕೆ ಏಸುಕ್ರಿಸ್ತನ ಮೇಲಿನ ಪ್ರೀತಿಗಿಂತ ಯಹೂದಿಯರ ಆರ್ಥಿಕ ಪಾರಮ್ಯದ ಮೇಲಿನ ಮತ್ಸರವೇ ಕಾರಣವಾಗಿತ್ತು. ಇದು ಎಷ್ಟರಮಟ್ಟಿಗೆ ಅವರನ್ನು ಕುರುಡು ಮಾಡಿತೆಂದರೆ, ತಮ್ಮ ಕಣ್ಣೆದುರೇ ತಮ್ಮ ಪರಿಚಿತರು ಕಗ್ಗೊಲೆಗೆ ಒಳಗಾಗುತ್ತಿರುವಾಗಲೂ ಅವರು ಆನಂದಿಸಿದರು. ಸದ್ಯ,
ಈ ದೇಶವನ್ನು ಆ ಭ್ರಮಾಧೀನ ಮನಸ್ಥಿತಿಗೆ ತಯಾರುಗೊಳಿಸಲಾಗುತ್ತಿದೆ. ಮುಸ್ಲಿಮರಿಗೆ ಸಂಬಂಧಿಸಿದ ಒಂದೊAದು ಸಂಕೇತಗಳನ್ನೂ ಅಪಹಾಸ್ಯಗೊಳಿಸುವ ಮತ್ತು ಅವರನ್ನು ಈ ನೆಲದ ಸಂಸ್ಕೃತಿಗೆ ಅನ್ಯ ಎಂದು ಬಿಂಬಿಸುವ ಶ್ರಮಗಳು ಅತ್ಯಂತ ಜೋರಾಗಿ ನಡೆಯುತ್ತಿದೆ. ಮುಸ್ಲಿಮರ ಆಹಾರ ಕ್ರಮ ಅನ್ಯ, ಅವರ ವಸ್ತ್ರ ಕ್ರಮ ಅನ್ಯ, ಅವರ ಆರಾಧನಾ ಕ್ರಮ ಅನ್ಯ ಎಂಬ ಪ್ರಚಾರಗಳು ನಡೆಯುತ್ತಿವೆ. ಇದು ಅಂತಿಮವಾಗಿ ಅವರೇ ಅನ್ಯ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಹಿಜಾಬ್ ವಿವಾದ ಈ ಅನ್ಯಗೊಳಿಸುವ ಅಭಿಯಾನದ ಒಂದು ಭಾಗ ಮಾತ್ರ.

ಈ ಅನ್ಯಗೊಳಿಸುವ ಗುಂಪಿಗೆ ಮುಸ್ಲಿಮರೇ ಯಾಕೆ ಗುರಿ ಎಂದರೆ, ಈ ಗುಂಪಿನ ಒಳಗಿನ ಹುಳುಕುಗಳನ್ನು ಮರೆಮಾಚುವುದಕ್ಕೆ ಅವರಷ್ಟು ಸುಲಭದ ದಾಳ ಬೇರೆ ಇಲ್ಲ. ಭಯೋತ್ಪಾದನೆಯ ಹೆಸರಲ್ಲಿ ಈಗಾಗಲೇ ಬಲಿಷ್ಠ ಶಕ್ತಿಗಳು ಒಂದು ಪ್ರಬಲವಾದ ವಾದ ಸರಣಿಯನ್ನು ಬಿತ್ತಿ ಫಸಲು ಪಡೆಯುತ್ತಿದೆ. ಈ ಬಲಿಷ್ಠ ರಾಷ್ಟ್ರಗಳ ಕೈಯಲ್ಲೇ ಸರ್ವ ಮಾಧ್ಯಮ ಸಂಸ್ಥೆಗಳೂ ಇರುವುದರಿಂದ ಅಲ್ಲಿ ತಯಾರಾಗುವ ‘ಆಹಾರ’ವನ್ನೇ ಜಗತ್ತಿಗೆ ಉಣಬಡಿಸುವುದಕ್ಕೆ ಮತ್ತು ಅದುವೇ ಅತ್ಯಂತ ರುಚಿಕರ ಆಹಾರ ಎಂದು ಬಿಂಬಿಸುವುದಕ್ಕೆ ಸಾಧ್ಯವಾಗಿದೆ. ಆದ್ದರಿಂದ, ಮುಸ್ಲಿಮರನ್ನು ಶತ್ರುವಾಗಿ ಎತ್ತಿಕೊಳ್ಳುವುದು ಕ್ರೈಸ್ತರನ್ನು ಎತ್ತಿಕೊಳ್ಳುವುದಕ್ಕಿಂತ ಸುಲಭ. ಸ್ವಾತಂತ್ರ‍್ಯಪೂರ್ವದಲ್ಲಿ ಮುಸ್ಲಿಮರನ್ನು ದಾಳಿಕೋರರೆಂದು ಬಿಂಬಿಸಿ ಹಿಂದೂಗಳ ಧ್ರುವೀಕರಣಕ್ಕೆ ಶ್ರಮಿಸಲಾದರೆ, ಈಗ ಮುಸ್ಲಿಮರ ಆಚರಣೆ ಮತ್ತು ಆರಾಧ ನೆಗಳನ್ನೇ ಶತ್ರುವಾಗಿ ಬಿಂಬಿಸುವ ಮೂಲಕ ಧ್ರುವೀಕರಣ ನಡೆಯುತ್ತಿದೆ.

‘ಕುತ್ತಿಗೆಗೆ ಹಾಕುವ ಶಾಲನ್ನು ತಲೆಗೆ ಹಾಕಿಕೊಳ್ಳಲಿ ಬಿಡಿ’ ಎಂದು ಹೇಳಿ ಮುಗಿಸಬಹುದಾಗಿದ್ದ ಒಂದು ಇಶ್ಯೂ ಈ ಮಟ್ಟಕ್ಕೆ ಬೆಳೆ ದಿರುವುದಕ್ಕೆ ನಿಜವಾದ ಕಾರಣ ಸಮವಸ್ತ್ರ ನಿಯಮ ಅಲ್ಲವೇ ಅಲ್ಲ. ಸಮವಸ್ತ್ರ ನಿಯಮದಲ್ಲಿ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕಬಾರದು ಎಂಬ ಕಟ್ಟಾಜ್ಞೆಯೂ ಇಲ್ಲ. ಈ ವಿವಾದ ಈಗಾಗಲೇ ಕಟ್ಟಿ ಬೆಳೆಸಿರುವ ಮತ್ಸರ ಮತ್ತು ದ್ವೇಷದ ಫಲಿತಾಂಶ. ಈ ಮತ್ಸರ ಮತ್ತು ದ್ವೇಷವನ್ನು ಎಲ್ಲಿವರೆಗೆ ಜೀವಂತ ಇಡಲು ಸಾಧ್ಯವಾಗುತ್ತವೋ ಅಲ್ಲಿವರೆಗೆ 80%ದಷ್ಟು ಮಂದಿ ತಮ್ಮ ಮೇಲಿನ ಜಾತೀಯ ಅಸಮಾನತೆ, ನಿರುದ್ಯೋಗದಂಥ ನಿಜವಾದ ಸಮಸ್ಯೆಗಳತ್ತ ಗಮನಹರಿಸ ದಂತೆ ತಡೆಯಲೂ ಸಾಧ್ಯವಾಗುತ್ತದೆ. ಹಿಜಾಬ್ ವಿವಾದ ಈ ಸಂಚಿನ ಮುಂದುವರಿದ ಭಾಗ, ಅಷ್ಟೇ.