ಜಾಗತಿಕ ಅರ್ಥವ್ಯವಸ್ಥೆಯ ಕುಸಿತದ ಪ್ರಾರಂಭ ಭಾರತದಲ್ಲಿ- ಐಎಂಎಫ್ ಆತಂಕ

0
837

ಸನ್ಮಾರ್ಗ ವಾರ್ತೆ-

ವಾಷಿಂಗ್ಟನ್, ಅ. 9: ಜಗತ್ತಿನ ಶೇ.90 ರಷ್ಟು ದೇಶಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು ಭಾರತದಲ್ಲಿ ಈ ಬಿಕ್ಕಟ್ಟು ಕಂಡು ಬರುತ್ತಿದೆ ಎಂದು ಐಎಂಎಫ್ ಮ್ಯಾನೇಜಿಂಗ್ ಡೈರಕ್ಟರ್ ಕ್ರಿಸ್ಟಲಿನಾ ಜಾರ್ಜ್ ಹೇಳಿದರು. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಆರ್ಥಿಕ ಮುಗ್ಗಟ್ಟು ಕಾಣಿಸಿಕೊಂಡಿದ್ದು ಐಎಂಎಫ್ ತನ್ನ ವಿಶ್ಲೇಷಣೆಯನ್ನು ಮುಂದಿನವಾರ ಪ್ರಕಟಿಸುತ್ತಿದೆ ಎಂದು ಅವರು ಹೇಳಿದರು. ವ್ಯಾಪಾರ ಯುದ್ಧದಿಂದ ಜಗತ್ತಿನ ಜಿಡಿಪಿ 0.8ಕ್ಕೆ ಕುಸಿಯಿತು. ಎಲ್ಲ ದೇಶಗಳೂ ವ್ಯಾಪಾರ ಯುದ್ಧಕ್ಕಿಳಿದು ನಷ್ಟಮಾಡಿಕೊಂಡಿವೆ. ಇದರ ಪರಿಣಾಮವಂತೂ ದೀರ್ಘಕಾಲದವರೆಗೆ ಮುಂದುವರಿಯಲಿದೆ.

ಟ್ಯಾರಿಫ್‍ನಲ್ಲಿ ಯುದ್ಧಕ್ಕಿಳಿಯದೆ ಒಟ್ಟುಗೂಡಿ ಕೆಲಸಮಾಡಲು ದೇಶಗಳು ಸಿದ್ಧವಾಗಬೇಕು. ಭಾರತದ ಆರ್ಥಿಕ ಬೆಳವಣಿಗೆ ದರ 0.3 ಕಡಿಮೆಯಾಗಿದ್ದು ಶೇ. 7ಕ್ಕೆ ಕುಸಿಯಿತು. ದೇಶದೊಳಗೆ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಅವರು ತಿಳಿಸಿದರು. ಇದು ಭಾರತಕ್ಕಾದ ಹಿನ್ನಡೆಯೆಂದು ಅವರು ವಿಶ್ಲೇಷಿಸಿದರು.