ಆರ್ಥಿಕ ಮಾಂದ್ಯ ಇದೆಯೋ ಇಲ್ವೊ ಕೆಲಸ ಇಲ್ಲದಾಗುತ್ತಿದೆ, ಉದ್ಯಮ ಮುಚ್ಚಿಹೋಗುತ್ತಿವೆ; ಇದು ಸತ್ಯ- ಉದ್ಧವ್ ಠಾಕ್ರೆ

0
482

ಸನ್ಮಾರ್ಗ ವಾರ್ತೆ-

ಮುಂಬೈ, ಅ.9: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಮಾತಾಡಿದ್ದಾರೆ. ಈಗಿನ ಆರ್ಥಿಕ ಮಾ೦ದ್ಯ ಒಪ್ಪಿದರೂ ಇಲ್ಲದಿದ್ದರೂ ಕೆಲಸ ಹೋಗುತ್ತಿದೆ. ಉದ್ಯಮ ಮುಚ್ಚಿಹೋಗುತ್ತಿವೆ. ಇದಕ್ಕೆ ಸಂಬಂಧಿಸಿ ಸಮಸ್ಯೆ ಇದೆ ಎಂದು ಠಾಕರೆ ಹೇಳಿದರು. “ಆರ್ಥಿಕ ಮಾಂದ್ಯ ಇದೆಯೋ ಇಲ್ವೊ ಎಂದು ನಾವು ನಂತರ ಮನದಟ್ಟುಮಾಡಿಕೊಳ್ಳೋಣ, ಆದರೆ ಕೆಲಸ ಇಲ್ಲದಾಗುತ್ತಿದೆ. ಉದ್ಯಮ ಮುಚ್ಚಿಹೋಗುತ್ತಿವೆ. ಇದು ಬಹಳ ಸ್ಪಷ್ಟವಾಗಿ ನಮಗೆ ಕಾಣುತ್ತಿವೆ. ಅದನ್ನು ನಾವು ಒಪ್ಪಬೇಕು” ಎಂದು ಅವರು ಹೇಳಿದರು.

ಮುಂಬೈಯ ಅರ್‍ಐ ಕಾಲನಿಯಲ್ಲಿ ಮರ ಕಡಿದ ಘಟನೆಯಲ್ಲಿ ಅಲ್ಲಿ ಕಾರು ಶೆಡ್ ಆರಂಭಿಸುವ ತಿರ್ಮಾನದಲ್ಲಿ ಪಾರ್ಟಿಗೆ ವಿರೋಧವಿದೆ. ಮರಗಳನ್ನು ಕೊಂದವರು ದೊಡ್ಡ ಮಟ್ಟದ ಬೆಲೆ ತೆರಬೇಕಾಗುವುದು ಎಂದು ಅವರು ಹೇಳಿದರು. ತನ್ನ ವಿರೋಧ ಕಾರು ಪಾರ್ಕಿಂಗ್ ಕುರಿತಾದ್ದಲ್ಲ. ಅದಕ್ಕೆ ಆಯ್ದುಕೊಂಡ ಸ್ಥಳದ ಕುರಿತಾಗಿದೆ ಎಂದು ಅವರು ಹೇಳಿದರು. ದ್ವೇಷದ ರಾಜಕೀಯ ಸರಿಯಲ್ಲ. ತನಿಖಾ ಸಂಸ್ಥೆಗಳನ್ನು, ಇಡಿಯನ್ನು, ಸಿಬಿಐಯನ್ನು ರಾಜಕಾರಣಿಗಳ ವಿರುದ್ಧ ಪ್ರಯೋಗಿಸುವ ಕುರಿತು ಅವರು ಹೀಗೆ ಹೇಳಿದರು. ದ್ವೇಷದ ರಾಜಕೀಯಕ್ಕೆ ಮಹಾರಾಷ್ಟ್ರದಲ್ಲಿ ಸ್ಥಳವಿಲ್ಲ. ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್, ಅವರ ಸಹೋದರ ಪುತ್ರ ಅಜಿತ್ ಪವಾರ್ ಇಡಿ ಕೇಸು ಹಾಕಿದ್ದನ್ನು ಸೂಚಿಸಿ ಅವರು ಈ ವಿಷಯ ಹೇಳಿದ್ದಾರೆ. ಅಧಿಕಾರ ಮತ್ತು ಅವಕಾಶವನ್ನು ಎಂದೂ ದುರ್ಬಳಕೆ ಮಾಡಬಾರದು. ದ್ವೇಷದ ರಾಜಕೀಯ ಮಾಡಬಾರದೆಂದು ಉದ್ಧವ್ ಎಚ್ಚರಿಕೆ ನೀಡಿದರು.