ಸನ್ಮಾರ್ಗ ವಾರ್ತೆ
ಲೆಬನಾನಿನ ಹಿಝ್ ಬುಲ್ಲಾ ಹಾರಿಸಿದ ಡ್ರೋನ್ ಗಳನ್ನು ತಡೆಯುವುದಕ್ಕೆ ಇಸ್ರೇಲ್ ಸಿಡಿಸಿದ ಬಂದೂಕಿಗೆ ಇಸ್ರೇಲ್ ನಲ್ಲಿ ಹಲವು ಮನೆಗಳು ಆಹುತಿಯಾಗಿವೆ. ಇಸ್ರೇಲಿನ ಪ್ರತಿರೋಧ ಸೇನೆಯ ಹೆಲಿಕಾಪ್ಟರ್ ನಿಂದ ಡ್ರೋನಿಗೆ ವಿರುದ್ಧವಾಗಿ ಬಂದೂಕನ್ನು ಸಿಡಿಸಲಾಯಿತು. ಇದು ಗುರಿತಪ್ಪಿ ಪಶ್ಚಿಮ ಇಸ್ರೇಲ್ ನ ಅನೇಕಾರು ಮನೆಗಳನ್ನು ಆಹುತಿ ಪಡೆದುಕೊಂಡಿದೆ ಎಂದು ವರದಿಯಾಗಿದೆ.
ಲೆಬನಾನ್ ಗಡಿಯ ಮೇಲಿನಿಂದ ಹಾರಿದ ಡ್ರೋನ್ಗಳನ್ನು ತಡೆಯುವುದಕ್ಕೆ 30 ಎಂಎಂ ಬಂದೂಕನ್ನು ಉಪಯೋಗಿಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಈ ಶ್ರಮದ ನಡುವೆ ಇಸ್ರೇಲಿನಲ್ಲಿರುವ ಹಲವು ಮನೆಗಳಿಗೆ ಶೆಲ್ ಗಳು ಬಡಿದಿರುವುದಾಗಿ ಸೇನೆ ಒಪ್ಪಿಕೊಂಡಿದೆ. ಆದರೆ ಜನರಿಗೆ ಆಗಿರುವ ಗಾಯ ಮತ್ತು ಹಾನಿಯ ಆಳವನ್ನು ಇಸ್ರೇಲ್ ಸರಕಾರ ಮುಚ್ಚಿಟ್ಟಿದೆ.
ಇದೇ ವೇಳೆ ಸೌದಿ ರಾಜಧಾನಿಯಾದ ರಿಯಾದ್ ನ ಹತ್ತಿರ ಅಲ್ ಕರ್ಜ್ ಪ್ರದೇಶದಲ್ಲಿ ಜನವಾಸದ ಸಮೀಪ ಮಿಸೈಲ್ ಅಪ್ಪಳಿಸಿ ಓರ್ವ ಭಾರತೀಯ ಸೇರಿ ಇಬ್ಬರು ಸಾವಿಗೀಡಾಗಿದ್ದಾರೆ.
ಪ್ರಮುಖ ಕ್ಲೀನಿಂಗ್ ಅಂಡ್ ಮೇಂಟೆನೆನ್ಸ್ ಕಂಪನಿಯ ಸಿಬ್ಬಂದಿಗಳು ವಾಸಿಸುತ್ತಿದ್ದ ಪ್ರದೇಶಕ್ಕೆ ಈ ಕ್ಷಿಪಣಿ ಅಪ್ಪಳಿಸಿದೆ. ಗಾಯಗೊಂಡ ಹನ್ನೆರಡು ಮಂದಿ ಕೂಡ ಬಾಂಗ್ಲಾದೇಶಿಯರಾಗಿದ್ದಾರೆ. ಈ ದಾಳಿಯಿಂದ ಹಲವು ಕಟ್ಟಡಗಳಿಗೆ ಗಂಭೀರ ಹಾನಿಯಾಗಿದೆ.












