ಈಜಿಪ್ಟ್: ಮುರ್ಸಿಯ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ

0
460

ಸನ್ಮಾರ್ಗ ವಾರ್ತೆ

ಕೈರೋ: ಮಾಜಿ ಈಜಿಪ್ಟ್ ಅಧ್ಯಕ್ಷ ಮುಹಮ್ಮದ್ ಮುರ್ಸಿ ಮತ್ತು 88 ಮುಸ್ಲಿಮ್ ಬ್ರದರ್‌ ಹುಡ್ ಸದಸ್ಯರ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಈಜಿಪ್ಟ್ ಕೋರ್ಟ್ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಬ್ರದರ್‌ ಹುಡ್ ನಾಯಕರು ಮತ್ತು ಸದಸ್ಯರ ಸಹಿತ 89 ಮಂದಿಯ ಆಸ್ತಿಗಳನ್ನು ವಶಪಡಿಸಿಕೊಂಡು ಖಜಾನೆಗೆ ಸೇರಿಸುವಂತೆ ತುರ್ತು ಕಲಾಪ ನಡೆಸಲು ಆದೇಶ ಹೊರಡಿಸಲಾಗಿದೆಯೆಂದು ನ್ಯಾಯಾಂಗ ಮೂಲಗಳು ಎಎಫ್‍ಪಿ ಹೇಳಿವೆ.

ಆರು ವರ್ಷ ಜೈಲಿನಲ್ಲಿದ್ದ ಬಳಿಕ ವಿಚಾರಣೆಯ ವೇಳೆ 2019 ಜೂನ್‍ನಲ್ಲಿ ಮುಹಮ್ಮದ್ ಮುರ್ಸಿಯವರು ನಿಧನ ಹೊಂದಿದರು. ಮುರ್ಸಿ ಕುಟುಂಬದ ಆಸ್ತಿಯನ್ನು ಮುಟ್ಟು ಗೋಲು ಹಾಕಲಾಗುವುದು. ಬ್ರದರ್‌ ಹುಡ್ ಹಿರಿಯ ನಾಯಕ ಮುಹಮ್ಮದ್ ಬದೀಆ ಅಲ್ ಶಾತ್ವಿರ್, ಮುಹಮ್ಮದ್ ಬಲ್ತಾಝ್ ರನ್ನು ಗುರಿಯಿಟ್ಟು ಈ ಕ್ರಮಕ್ಕೆ ಕೋರ್ಟು ಮುಂದಾಗಿದೆ.