ಲಕ್ಷದ್ವೀಪದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿ

0
366

ಸನ್ಮಾರ್ಗ ವಾರ್ತೆ

ಕವರತ್ತಿ,: ದೇಶದಲ್ಲಿ ಕೊರೋನ ಹರಡಲು ಆರಂಭವಾಗಿ ಒಂದು ವರ್ಷವಾಗುತ್ತಿರುವಾಗ ಲಕ್ಷದ್ವೀಪದಲ್ಲಿ ಮೊದಲ ಕೊರೊನ ಪ್ರಕರಣ ದೃಢಪಟ್ಟಿದೆ. ಇದುವರೆಗೆ ಭಾರತದ ಕೊರೋನ ಇಲ್ಲದ ಪ್ರದೇಶವಾಗಿ ಲಕ್ಷದ್ವೀಪ ಗುರುತಿಸಿಕೊಂಡಿತ್ತು. ಸೋಮವಾರ ಒಬ್ಬರಿಗೆ ಇಲ್ಲಿ ಕೊರೋನ ದೃಢಪಟ್ಟಿದೆ. ಕೊಚ್ಚಿಯಿಂದ ಹಡಗಿನಲ್ಲಿ ಕವರತ್ತಿಗೆ ಬಂದ ಯೋಧನಿಗೆ ಕೊರೋನ ಸೋಂಕು ದೃಢಪಟ್ಟಿರುವುದಾಗಿ ಅಧಿಕೃತ ಮೂಲಗಳನ್ನು ಉದ್ಧರಿಸಿ ಪಿಟಿಐ ವರದಿ ಮಾಡಿದೆ.

ಯೋಧನು ದ್ವೀಪದ ನಿವಾಸಿಯಲ್ಲ. ಇವರೊಂದಿಗೆ ಸಂಪರ್ಕವಿರುವವರೆಲ್ಲರೂ ಕ್ವಾರಂಟೈನ್‍ನಲ್ಲಿರಲು ಅಧಿಕಾರಿಗಳು ಹೇಳಿದ್ದಾರೆ. ಕೊಚ್ಚಿಯಿಂದ ಬರುವವರಿಗೆ ಕಡ್ಡಾಯ ಕ್ವಾರಂಟೈನ್ ತೆರವುಗೊಳಿಸಿದ ಬೆನ್ನಿಗೆ ದ್ವೀಪದಲ್ಲಿ ಕೊರೋನ ಕಾಣಿಸಿಕೊಂಡಿದೆ.