ರಾಮನಗರ: ಹೆಚ್‌ಆರ್‌ಎಸ್ ವತಿಯಿಂದ ಸಾರ್ವಜನಿಕರಿಗಾಗಿ “ತುರ್ತು ಚಿಕಿತ್ಸೆ ಹಾಗೂ ರಕ್ಷಣಾ ತರಬೇತಿ ಶಿಬಿರ”

0
164

ಸನ್ಮಾರ್ಗ ವಾರ್ತೆ

ರಾಮನಗರ: ಇಲ್ಲಿನ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಭಾನುವಾರ ಹೆಚ್.ಆರ್.ಎಸ್. ವತಿಯಿಂದ ಸಾರ್ವಜನಿಕರಿಗಾಗಿ ತುರ್ತು ಸಂದರ್ಭದಲ್ಲಿ ರಕ್ಷಿಸಲು ಪ್ರಥಮ ಚಿಕಿತ್ಸೆ, ಪಾರುಗಾಣಿಕೆ ತರಬೇತಿ ಶಿಬಿರ ಆಯೋಜಿಸಲಾಯಿತು.

ಕ್ಯಾಪ್ಟನ್ ಅಮೀರ್ ಸಿದ್ದೀಕಿ, ಸಹ ಕ್ಯಾಪ್ಟನ್ ಅಬ್ರಾರ್ ಅಹ್ಮದ್ ಹಾಗೂ ತರಬೇತುದಾರ ಮುನವ್ವರ್ ತಂಡವು ಪ್ರಾಯೋಗಿಕ ಹಾಗೂ ಪಿ.ಪಿ.ಟಿ. ಪ್ರಸಂಟೇಶನ್ ಮೂಲಕ ಮಾಹಿತಿ ನೀಡಿದರು.

ಹೆಚ್‌ಆರ್‌ಎಸ್‌ನ ಕಾರ್ಯಗಳನ್ನು ಶ್ಲಾಘಿಸಿದ ಸ್ಥಳೀಯರು, ರಾಮನಗರದಲ್ಲಿಯೇ ಹೆಚ್.ಆರ್.ಎಸ್. ತಂಡವನ್ನು ರಚಿಸುವ ಮೂಲಮ ಸ್ವಯಂಸೇವಕರಾಗಿ ಜನರ ಸೇವೆ ಮಾಡಲು ಮುಂದಾಗುವುದಾಗಿ ಹೇಳಿದರು‌.

ಹೆಚ್.ಆರ್.ಎಸ್. ಮಾನವೀಯ ಸೇವಾ ಸಂಸ್ಥೆಯಾಗಿದ್ದು ಇತ್ತೀಚೆಗೆ ರಾಮನಗರದ ಜನತೆಗೆ ನೀಡಿದ ಸೇವೆಯನ್ನು ಸ್ಮರಿಸುವುದರೊಂದಿಗೆ ಲಯನ್ಸ್ ಕ್ಲಬ್ ಆಯೋಜಿಸಿದ ಕಣ್ಣಿನ ಶಿಬಿರದಲ್ಲಿಯೂ ಜಂಟಿಯಾಗಿ ಭಾಗವಹಿಸಿ ಕನ್ನಡಕಗಳನ್ನು ಒದಗಿಸಿದ್ದರು. ಇಂತಹ ಸಂಸ್ಥೆಗೆ ಲಯನ್ಸ್ ಕ್ಲಬ್ ಸದಾ ಸಹಕರಿಸುವುದು” ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸಾವುಕಾರ್ ಅಮ್ಜದ್ ಅವರು ಹೇಳಿದರು.

“ಲಯನ್ಸ್ ಕ್ಲಬ್‌ನ ಸೇವೆಯೂ ಮಾನವೀಯ ಸೇವೆಯಾಗಿದೆ. ಮಾನವೀಯ ಸೇವೆಯನ್ನು ಮಾಡುವ ಹೆಚ್.ಆರ್.ಎಸ್. ಸಂಸ್ಥೆಯೊಂದಿಗೆ ಸಹಕರಿಸುವುದು ನಮ್ಮ ಕರ್ತವ್ಯವಾಗಿದೆ. ದೇವ ಸಂಪ್ರೀತಿಯ ದೂರ ದೃಷ್ಟಿಯನ್ನಿಟ್ಟುಕೊಂಡು ಮಾಡುವ ಮಾನವೀಯ ಸೇವೆಯು ನಿಜವಾಗಿಯೂ ಮಹಾ ಕಾರ್ಯ. ಸೇವೆಗೆ ತಕ್ಕಂತೆ ಹೆಸರನ್ನೂ ಇಟ್ಟಿದ್ದೀರಿ” ಎಂದು ಅತಿಥಿಗಳಾದ ಲಯನ್ ಶೇಶಾದ್ರಿ ಅಯ್ಯರ್ ಅವರು ಹೇಳಿದರು.

ವೇದಿಕೆಯಲ್ಲಿ ಅಸ್ಲಮ್ ಪಾಷಾ, ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೌಲಾನ ಅಬ್ದುಲ್ ಅಝೀಮ್ ಖಾನ್ ತೆಲಂಗಾಣ ಇವರ ಉದ್ಭೋಧೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜೊತೆ ಕಾರ್ಯದರ್ಶಿ ಫಾರೂಕ್ ನಶ್ಚರ್ ಪ್ರಾಸ್ತಾವಿಕ ಹಾಗೂ ಸ್ವಾಗತ ಮಾಡಿದರು. ರಹಿಮಾನ್ ಶರೀಫ್ ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದವನ್ನಿತ್ತರು.