ಭಗವದ್ಗೀತೆ ಜ್ಞಾನ ಮತ್ತು ಶಾಂತಿಯ ಮಾರ್ಗ: ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

0
193

ಸನ್ಮಾರ್ಗ ವಾರ್ತೆ

ಚಂಡೀಗಢ: ಕುರುಕ್ಷೇತ್ರದ ಪುಣ್ಯಭೂಮಿಯಲ್ಲಿ ಪಠಿಸಲಾದ ಪವಿತ್ರ ಗ್ರಂಥ ‘ಭಗವದ್ಗೀತೆ’ಯ ಶ್ಲೋಕಗಳು ಮಾನವಕುಲಕ್ಕೆ ಜ್ಞಾನದ ಮಾರ್ಗವನ್ನು ಮತ್ತು ಯುಗಯುಗಾಂತರಗಳಿಂದ ಶಾಶ್ವತ ಶಾಂತಿಯನ್ನು ತೋರಿಸಿವೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. 5000 ವರ್ಷಗಳ ಹಿಂದೆ ಕೃಷ್ಣ ಭಗವದ್ಗೀತೆಯಲ್ಲಿ ಕರ್ಮದ ಮಹತ್ವ ಕುರಿತು ಉಪನ್ಯಾಸಗಳನ್ನು ನೀಡಿದ್ದರು ಎಂದು ಅವರು ಹೇಳಿದರು.

ಈ ಪವಿತ್ರ ಗ್ರಂಥ ನಮಗೆ ಶಾಂತಿ ಸೌಹಾರ್ದತೆಯ ಸಾರವನ್ನು ಕಲಿಸಿದೆ ಎಂದು ಅವರು ಅಂತಾರಾಷ್ಟ್ರೀಯ ಗೀತಾ ಮಹೋತ್ಸವ 2022ರಲ್ಲಿ ಭಾನುವಾರ ಕುರುಕ್ಷೇತ್ರ ಅಭಿವೃದ್ಧಿ ಮಂಡಳಿ ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ ‘ಗೀತಾ ವೈಶ್ವಿಕ್ ಪಥ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಕುರುಕ್ಷೇತ್ರದ ವಿವಿಧ ಶಾಲೆಗಳಿಂದ 18,000 ವಿದ್ಯಾರ್ಥಿಗಳು ಗ್ರಂಥಧ 18ನೇ ಶ್ಲೋಕವನ್ನು ಪಾರಾಯಣ ಮಾಡಿದರು. ಹರಿಯಾಣದ ಸರಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳಿಂದ 75,000 ವಿದ್ಯಾರ್ಥಿಗಳು ಮತ್ತು ವಿವಿಧ ದೇಶಗಳಿಂದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗೀತಾ ಜಯಂತಿಯ ಶುಭಾಶಯಗಳನ್ನು ತಿಳಿಸಿದ ಖಟ್ಟರ್, ಕುರುಕ್ಷೇತ್ರವನ್ನು ‘ಭಗವದ್ಗೀತೆ’ಯ ಮೂಲ ಎಂದು ಬಣ್ಣಿಸಿದರು, ಸಾವಿರಾರು ವರ್ಷಗಳ ಹಿಂದೆ ಶ್ರೀಕೃಷ್ಣನು ಪವಿತ್ರ ಗ್ರಂಥದ ಬೋಧನೆಗಳನ್ನು ನೀಡಿದ ದಿನ ಇದು ಎಂದು ಹೇಳಿದರು. ಈ ಹಿಂದೆ ಜಿಲ್ಲಾ ಮಟ್ಟದಲ್ಲಿ ಮಾತ್ರ ಆಚರಿಸಲಾಗುತ್ತಿದ್ದ ಈ ಹಬ್ಬಕ್ಕೆ 2016ರಿಂದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಎಂಬ ಬಿರುದು ದೊರೆತಿದೆ.