ಇಂಗ್ಲಿಷ್ ನ್ಯೂಸ್ ಚ್ಯಾನೆಲ್‍ನಲ್ಲಿ ಬಿಜೆಪಿಗೆ ಬಹುಮತವಿಲ್ಲ!

0
1550

ಹೊಸದಿಲ್ಲಿ,ಮೇ 20: ನ್ಯೂಸ್ ಎಕ್ಸ್ ನೆಟಾ ದೇಶದಲ್ಲಿ ತ್ರಿಶಂಕು ಲೋಕಸಭಾ ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳುತ್ತಿದೆ. ಬಿಜೆಪಿಯ ಎನ್‍ಡಿಎ ಕೂಟಕ್ಕೂ, ಯುಪಿಎ ಕೂಟಕ್ಕೂ ನ್ಯೂಸ್ ಎಕ್ಸ್ ಪ್ರಕಾರ ಬಹುಮತವಿಲ್ಲ. ಆದರೆ ಎನ್‍ಡಿಎ ಬಹುಮತದ ಸಮೀಪ ತಲುಪಲಿದೆ. ಎನ್‍ಡಿಎಗೆ 242 ಸೀಟುಗಳು ಯುಪಿಎಗೆ 165 ಸೀಟುಗಳು ಮತ್ತು ಪ್ರಾದೇಶಿಕ ಪಕ್ಷಗಳಿಗೆ 136 ಸೀಟುಗಳು ಸಿಗಲಿವೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ನಷ್ಟ

ಬಿಜೆಪಿ 33,ಮಹಾಸಖ್ಯ 43, ಕಾಂಗ್ರೆಸ್ 04, ಇತರರು 01,ಸೀಟುಗಳಿಸಲಿದ್ದಾರೆ. ಬಿಹಾರದಲ್ಲಿ ಎನ್‍ಡಿಎ ಮಹಾಸಖ್ಯದ ನಡುವೆ ಕತ್ತುಕತ್ತಿನ ಪೈಪೋಟಿ ಇದೆ. ಬಿಜೆಪಿ 21, ಮಹಾಸಖ್ಯ 19 ಸೀಟುಗಳನ್ನು ಪಡೆದುಕೊಳ್ಳಲಿವೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಹೆಚ್ಚು ಗಟ್ಟಿಯಾಗಿದ್ದು ಹದಿನೆಂಟು ಸ್ಥಾನಗಳನ್ನು ಪಡೆಯುತ್ತದೆ. ಕಾಂಗ್ರೆಸ್ಸಿಗೆ 11 ಸ್ಥಾನಗಳು ಲಭಿಸುತ್ತದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‍ನ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ ಬಿಜೆಪಿಗೆ 17 ಮತ್ತು ಕಾಂಗ್ರೆಸ್ 8 ಸೀಟುಗಳನ್ನು ಪಡೆಯಲಿದೆ. ಛತ್ತೀಸ್ ಗಟದಲ್ಲಿ ಬಿಜೆಪಿಗೆ ಏಳು ಮತ್ತು ಕಾಂಗ್ರೆಸ್‍ಗೆ ನಾಲ್ಕು ಸೀಟುಗಳಲ್ಲಿ ವಿಜಯ ಒಲಿಯಲಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‍ಗೆ 29, ಬಿಜೆಪಿ 11 ಮತ್ತು ಕಾಂಗ್ರೆಸ್ 2 ಸೀಟುಗಳನ್ನು ಪಡೆಯಲಿದೆ. ಇಲ್ಲಿ ಒಂದು ಕಾಲದ ಆಡಳಿತ ಪಕ್ಷ ಸಿಪಿಎಂ ಖಾತೆ ಕೂಡ ತೆರೆಯುವುದಿಲ್ಲ. ಇತರೆಲ್ಲ ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಎನ್‍ಡಿಎಯನ್ನು ಅಧಿಕಾರಕ್ಕೆ ತಂದಿದ್ದರೆ ಈ ಇಂಗ್ಲಿಷ್ ಚ್ಯಾನೆಲ್ ಅದಕ್ಕೆ ಅಂಗೀಕಾರ ನೀಡಿಲ್ಲ ಎನ್ನುವುದು ವಿಶೇಷವಾಗಿದೆ.