ಉತ್ತರಾಖಂಡದಲ್ಲಿ ಆರೆಸ್ಸೆಸ್‍ನಿಂದ ಮುಸ್ಲಿಮರಿಗೆ ಮದ್ರಸ ಯೋಜನೆ

0
413

ಉತ್ತರಾಖಂಡ,ಮೇ 20: ಝಿ ನ್ಯೂಸ್ ವರದಿಯ ಪ್ರಕಾರ ಉತ್ತರಾಖಂಡದ ಪ್ರತಿಯೊಂದು ಜಿಲ್ಲೆಯಲ್ಲಿ ತಲಾ ಒಂದು ಮದ್ರಸವನ್ನು ಆರಂಭಿಸುವ ಯೋಜನೆಯನ್ನು ಆರೆಸ್ಸೆಸ್ ಹಮ್ಮಿಕೊಂಡಿದೆ. ಈ ಕುರಿತು ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆದಿದ್ದು ಸರಕಾರ ಮದ್ರಸಾ ನಿರ್ಮಾಣಕ್ಕೆ ಅಗತ್ಯ ಜಮೀನು ಒದಗಿಸಲಿದೆ.

ಉತ್ತರಾಖಂಡದಲ್ಲಿ 20 ಸಾವಿರಕ್ಕೂ ಹೆಚ್ಚು ಮುಸ್ಲಿಮರ ಮಕ್ಕಳು 297 ಮದ್ರಸಗಳಲ್ಲಿ ಕಲಿಯುತ್ತಿದ್ದು, ಈ ಮದ್ರಸಾಗಳಲ್ಲಿ ಆಧುನಿಕ ಶಿಕ್ಷಣದ ಕೊರತೆ ಇದೆ ಎಂದು ಆರೆಸ್ಸೆಸ್ ಭಾವಿಸಿಕೊಂಡಿದೆ. ಇವುಗಳಲ್ಲಿ ಕೇವಲ ಮುಸ್ಲಿಂ ಧರ್ಮದ ಶಿಕ್ಷಣ ಕೊಡಲಾಗುತ್ತಿದೆ. ಆದರೆ ಆರೆಸ್ಸೆಸ್ ಮದ್ರಸಾಗಳಲ್ಲಿ ಕಂಪ್ಯೂಟರ್ ಮತ್ತು ವಿಜ್ಞಾನ ಎರಡನ್ನೂ ಕಲಿಸುವುದು ಎಂದು ಆರೆಸ್ಸೆಸ್ ಯೋಜನೆಯಾಗಿದೆ. ರಾಷ್ಟ್ರೀಯ ಮುಸ್ಲಿಂ ಮಂಚ್ ಮೂಲಕ ಮದ್ರಸಾ ತೆರೆಯುವುದು ಆರೆಸ್ಸೆಸ್‍ನ ಗುರಿಯಾಗಿದ್ದು ಮುಸ್ಲಿಂ ಮಂಚ್ ಆರೆಸ್ಸೆಸ್‍ನ ಸಹಯೋಗಿ ಸಂಘಟನೆಯಾಗಿದೆ.