ಎರಡನೇ ಬಾರಿಯೂ ಹಜ್ಜ್ ಭವನದ ಕನಸು ಭಗ್ನಗೊಳಿಸಿದ ಪಿಎಮ್ ಸಿ

0
781

ಕಳೆದ ಹತ್ತು ವರ್ಷಗಳಿಂದ ನೈಋತ್ಯ ಮಹಾರಾಷ್ಟ್ರದಿಂದ ಹಜ್ಜ್ಗೆ ತೆರಳುವ ತೀರ್ಥಯಾತ್ರಿಗಳಿಗೆಬೇಕಾಗಿ ಹಜ್ಜ್ ಭವನ ನಿರ್ಮಿಸುವ ಯೋಜನೆಯು ಭಗ್ನವಾಗುತ್ತಲೇ ಸಾಗುತ್ತಿದೆ. 2008 ರಲ್ಲಿ ಕೋರೆಗಾಂವ್ ಪಾರ್ಕಿನ ಮೌಲಾನಾ ಅಬ್ದುಲ್ ಕಲಾಮ್ ಆಝಾದ್ ಮೆಮೋರಿಯಲ್ ನಲ್ಲಿ ಹಜ್ಜ್ ಭವನ ನಿರ್ಮಿಸಲು ಜಾಗವನ್ನು ಮಂಜೂರು ಮಾಡಲಾಗಿತ್ತು. ಆದರೆ 2016 ರ ಅವಧಿಯಲ್ಲಿ ಸಮಸ್ತ ಹಿಂದೂ ಅಘಾದಿ ಸೇರಿದಂತೆ ಬಲಪಂಥೀಯ ಗುಂಪುಗಳ ತೀವ್ರ ವಿರೋಧದಿಂದಾಗಿ ಹಜ್ಜ್ ಹೌಸ್ ಯೋಜನೆಯನ್ನು ಕೈಬಿಡಲಾಯ್ತು. ತದನಂತರ 2017 ರಲ್ಲಿ ಖೋಂದ್ವಾ ದಲ್ಲಿ ಹಜ್ಜ್ ಭವನ ನಿರ್ಮಾಣದ ಭಾಗವಾಗಿ ಉದ್ಘಾಟನಾ ಸಮಾರಂಭವನ್ನು ನಡೆಸಲಾಯ್ತು.‌ಆದರೆ ಈ ಯೋಜನೆಯನ್ನೂ ಕೂಡ ಕೆಲವೇ ತಿಂಗಳುಗಳಲ್ಲಿ ಮುಚ್ಚಿಹಾಕಲಾಯ್ತು.
2016ರ ರಲ್ಲಿ ಪುಣೆ ಮುನ್ಸಿಪಲ್ ಕಾರ್ಪೊರೇಶನ್ ( ಪಿಎಮ್ ಸಿ) ತನ್ನ ಮಹಾಸಭೆಯಲ್ಲಿ ಖೋಂದ್ವಾದಲ್ಲಿ ಹಜ್ಜ್ ಭವನ ನಿರ್ಮಿಸಲು ಹಸಿರು ನಿಶಾನೆ ತೋರಿಸಿತ್ತಾದರೆ ಬಲಪಂಥೀಯ ಗುಂಪುಗಳ ವಿರೋಧಕ್ಕೆ ಮಣಿದು ಯೋಜನೆಯನ್ನು ಮುಚ್ಚಿಹಾಕಿತಲ್ಲದೇ ಎಲ್ಲ ಧರ್ಮೀಯರಿಗಾಗಿ ಸಾಮಾಜಿಕ ಸಾಂಸ್ಕೃತಿಕ ಕೇಂದ್ರ ನಿರ್ಮಿಸಲಾಗುವುದೆಂಬ ನಾಟಕೀಯ ಹೇಳಿಕೆ ನೀಡಿತು.
2017 ರ ಚುನಾವಣೆಯ ಕೆಲವು ತಿಂಗಳುಗಳಿಗೆ ಮುನ್ನ ಖೋಂದ್ವಾದಲ್ಲಿ ಹಜ್ಜ್ ಭವನ ನಿರ್ಮಿಸಲು ಉದ್ಘಾಟನಾ ಸಮಾರಂಭ ನಡೆಸುವ ಅಗತ್ಯವಾದರೂ ಏನಿತ್ತು? ಒಂದು ವೇಳೆ ಮತದಾರರನ್ನು ಯಾಮಾರಿಸುವುದು ಇದರ ಉದ್ದೇಶವಾಗಿದ್ದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಹಾಕಿತ್ತೇವೆ ಎಂಬುದಾಗಿ ನಿರಾಶರಾದ ಸ್ಥಳೀಯರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರವರಿಗೆ ಪತ್ರ ಬರೆದಿದ್ದಾರೆ.
” ಹಜ್ಜ್ ಭವನ ನಿರ್ಮಿಸಲು ಎರಡು ಬಾರಿ ಉದ್ಘಾಟನೆ ಮಾಡಿಯೂ ಕೂಡ ಯೋಜನೆಯನ್ನು ಮುಚ್ಚಿ ಹಾಕುವ ಮೂಲಕ ನಿರಂತರವಾಗಿ ನಮ್ಮ‌ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಇದು ಒಂದು ಪ್ರತ್ಯೇಕ ಸಮುದಾಯಕ್ಕೆ ದ್ರೋಹವೆಸಗಿದಂತಿದೆ” ಎಂದು ಲೋಕಿತ್ ಫೌಂಡೇಶನ್ ಸ್ಥಾಪಕರಾದ ಅಝರ್ ಖಾನ್ ತಿಳಿಸಿದ್ದಾರೆ.
” ಬೇಕು ಬೇಕೆಂದೇ ಈ ಯೋಜನೆಯನ್ನು ಜಾರಿಗೊಳಿಸದೇ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ನವೀ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಹಜ್ಜ್ ಭವನ ನಿರ್ಮಿಸಲು ಜಾಗವನ್ನು ಕಾಯ್ದಿರಿಸಿದೆ ಎಂದಾದಲ್ಲಿ ಯಾಕೆ ತಾನೆ ಪುಣೆ ಮುನ್ಸಿಪಲ್ ಕಾರ್ಪೊರೇಶನ್ ಗೆ ಈ ರೀತಿ ಮೀಸಲಾತಿಯನ್ನಿರಿಸಲು ಸಾಧ್ಯವಿಲ್ಲ. ಖೋಂದ್ವಾದಲ್ಲಿ ಹಜ್ಜ್ ಭವನ ನಿರ್ಮಿಸಲು ಎಲ್ಲ ಧರ್ಮೀಯರ ಸಹಮತಿ ಇರುವುದನ್ನು ವ್ಯಕ್ತ ಪಡಿಸಿದರೂ ಈ ಯೋಜನೆಯನ್ನು ರದ್ದು ಪಡಿಸಿರುವುದು ವಿಪರ್ಯಾಸಕರ” ಎಂದು ಸ್ಥಳೀಯರಾದ ವಾಜಿದ್ ಖಾನ್ ತಿಳಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಪಿಎಮ್ ಸಿ ಭವನ್ ರಚನಾ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಆದ ಸಂಜಯ್ ಶಿಂಧೆಯವರು” ಹಜ್ಜ್ ಭವನವನ್ನು ಕೇವಲ ಖಾಸಗಿ ಸ್ಥಳದಲ್ಲಿ ನಿರ್ಮಿಸಬಹುದು. ಈ ಕುರಿತು ಮಾಹಿತಿಯನ್ನು ನೀಡಲಾಗಿತ್ತಲ್ಲದೇ ಈ ಯೋಜನೆಯನ್ನು ರದ್ದು ಪಡಿಸಲಾಗಿತ್ತು” ಎನ್ನುತ್ತಾರೆ.
ಪುಣೆ ಪೋಲಿಸರ ಬಳಿ ಈ ಬೆಳೆವಣಿಗೆಗಗಳ ಕುರಿತು ಮಾಹಿತಿ ಕಲೆ ಹಾಕಿದಾಗ ” ಖೋಂದ್ವಾ ದಲ್ಲಿ ಹಜ್ಜ್ ಭವನ ನಿರ್ಮಾಣಕ್ಕೆ ಪೂರಕವಾದ ವಾತಾವರಣವಿಲ್ಲ. ಇದಲ್ಲದೇ ಈ ಪ್ರದೇಶದಲ್ಲಿ ಹಲವಾರು ಸಮಾಜವಿರೋಧಿ ಕೃತ್ಯಗಳು ಗತಿಸಿದ್ದು ಹಜ್ಜ್ ನ ನೆಪದಲ್ಲಿ ಅಪರಾಧಿಗಳು ತೀರ್ಥಯಾತ್ರಿಗಳ ವೇಷತೊಟ್ಟು ಪರಾರಿಯಾಗಬಹುದು” ಎಂಬ ದೂರುಗಳು ಕೇಳಿಬಂದಿವೆ ಎನ್ನುತ್ತಾರೆ.
ಆದರೆ ಈ ಹಿಂದೆ ಯೋಜನೆಯನ್ನು ಜಾರಿಗೊಳಿಸಲು ಉದ್ಘಾಟನೆ ನಡೆಸುವಾಗ ಆರಂಭದಲ್ಲಿ ಯೋಜನೆಗೆ ಒಂದು ಕೋಟಿ ರೂಪಾಯಿ ಮತ್ತು ತದನಂತರ 3 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದು ಆಶ್ವಾಸನೆ ನೀಡಲಾಗುವುದು ಎಂದು ಆಶ್ವಾಸನೆ ನೀಡಲಾಗಿತ್ತು.
ಅಷ್ಟಕ್ಕೂ, “ಮಹಾರಾಷ್ಟ್ರ ಪಶ್ಚಿಮ‌ ಭಾಗಗಳಿಂದ ಹಜ್ಜ್ ಗೆ ತೆರಳುವ ಯಾತ್ರಿಕರಿಗೆ ಸರಿಯಾದ ವಾಸ್ತವ್ಯ ಕೇಂದ್ರವಿಲ್ಲದಿರುವುದರಿಂದ ಈ ಯೋಜನೆಯನ್ನು ಜಾರಿಗೆ ತರಲಾದ ಕಾರಣವಾಗಿತ್ತೆಂದು ಹೇಳಲಾಗುತ್ತಿದೆಯಾದರೆ ಇದರ ಹಿಂದೆ ಚುನಾವಣೆಯಲ್ಲಿ ಹಿಡಿತ ಸಾಧಿಸುವ ದುರುದ್ದೇಶವಿತ್ತೇ?” ಎಂಬುದಾಗಿ ಗ್ರಾಮಸ್ಥರು ಸಂಶಯ ವ್ಯಕ್ತಪಡಿಸುತ್ತಿದ್ದರೆಂಬುದನ್ನು ಅಲ್ಲಗಳೆಯುವುಂತಿಲ್ಲ.