ಇರಾನ್‍ನ ಅಣು ಸ್ಥಾವರದ ಸಮೀಪ ಭೂಕಂಪ

0
1257

ಸನ್ಮಾರ್ಗ ವಾರ್ತೆ-

ಟೆಹ್ರಾನ್, ಜ. 8: ಯುದ್ಧ ಭೀತಿಯಲ್ಲಿರುವ ಇರಾನ್‍ನ ಅಣು ಸ್ಥಾವರದ ಸಮೀಪ ಭೂಕಂಪ ಆಗಿದೆ. ಬುಶ್‍ಹರ್ ಅಣು ನಿಲಯದ ಸಮೀಪ ಬುಧವಾರ ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯ ಭೂಕಂಪನ ದಾಖಲಾಗಿದೆ. ಇರಾನಿನ ಬೊರಸ್‍ಜಾನ್ ಸಮೀಪ ಹತ್ತು ಕಿಲೊಮೀಟರ್ ನಲ್ಲಿ ಭೂಕಂಪನ ಆಗಿದೆ ಎಂದು ಅಮೆರಿಕದ ಜಿಯೊಲಾಜಿಕಲ್ ಸರ್ವೇ(ಯುಎಸ್‍ಜಿಎಸ್) ತಿಳಿಸಿದೆ. ಬುಶ್‍ಹ್ರ್‍ನಿಂದ 70 ಕಿಲೊಮೀಟರ್ ದೂರದ ಬೊರಸ್‍ಜಾನ್ ಬುಶೆಹರ್ ನಗರದಲ್ಲಿ ನ್ಯೂಕ್ಲಿಯರ್ ಪ್ಲಾಂಟ್ ಇವೆ.

ಇದು ಒಂದು ಸಹಜ ಘಟನೆ ಎಂದು ಡಿಸೆಂಬರ್ ಕೊನೆಯಲ್ಲಿ ಇದೇ ರೀತಿಯ ಭೂಕಂಪನ ಆಗಿತ್ತೆಂದು ಸ್ಟ್ರಾಟಜಿಕ್ ಸೆಂಟರ್ ವೆಬ್ ಸೈಟ್ ಟ್ವೀಟ್ ಮಾಡಿದೆ. ಇರಾಕಿನ ಅಮೆರಿಕನ್ ಸೇನಾ ಕೇಂದ್ರದ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದ್ದು ಟೆಹ್ರಾನ್‍ನ ವಿಮಾನ ನಿಲ್ದಾಣದ ಸಮೀಪ ಉಕ್ರೇನಿನ ಜೆಟ್ ವಿಮಾನ ಪತನಗೊಂಡ ಸುದ್ದಿಯ ಬೆನ್ನಿಗೆ ಭೂಕಂಪನದ ಸುದ್ದಿ ಹೊರಬಂದಿದೆ.