ಸೇನಾ ಪ್ರವೇಶ ಪ್ರಶ್ನೆ ಪತ್ರಿಕೆ ಸೋರಿಕೆ; ಪರೀಕ್ಷೆ ರದ್ದು

0
380

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣದಿಂದ ಸೈನ್ಯಕ್ಕೆ ಸೇರ್ಪಡೆಗಾಗಿರುವ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಭೂ ಸೇನೆಯ ಸಾಮಾನ್ಯ ಕರ್ತವ್ಯದ ಕಾಮನ್ ಎಂಟ್ರನ್ಸ್ ಎಕ್ಸಾಮ್ ರದ್ದುಗೊಂಡಿದೆ.

ಘಟನೆಯಲ್ಲಿ ಸೈನಿಕ ಅಧಿಕಾರಿಗಳ ಸಹಿತ ಮೂವರನ್ನು ಪುಣೆಯಲ್ಲಿ ಬಂಧಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ದೊಡ್ಡ ಗ್ಯಾಂಗ್ ಇದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಮಿಲಿಟರಿ ಇಂಟಲಿಜೆನ್ಸ್, ಪುಣೆ ಕ್ರೈಂ ಬ್ರಾಂಚ್, ಪುಣೆ ನಗರ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ.