ಪೋಪ್ ಫ್ರಾನ್ಸಿಸ್‌ರಿಂದ ಇರಾಕಿಗೆ ಪ್ರಥಮ ಐತಿಹಾಸಿಕ ಭೇಟಿ

0
300

ಸನ್ಮಾರ್ಗ ವಾರ್ತೆ

ಬಗ್ದಾದ್: ಇತಿಹಾಸದಲ್ಲಿ ಮೊದಲ ಸಲ ಪೋಪ್ ಒಬ್ಬರು ಇರಾಕಿಗೆ ಭೇಟಿ ನೀಡುತ್ತಿದ್ದಾರೆ. ಪೋಪ್ ಫ್ರಾನ್ಸಿಸ್‍ರ ಇರಾಕ್ ಸಂದರ್ಶನ ಶುಕ್ರವಾರ ಆರಂಭವಾಗಲಿದೆ. ಕೊರೋನ ಪುನಃ ತೀವ್ರಗೊಂಡಿರುವ ದೇಶದಲ್ಲಿ ಕಠಿಣ ನಿಯಂತ್ರಣಗಳಿಗೆ ಸಿದ್ಧತೆ ಆರಂಭಗೊಂಡಿರುವ ಸಮಯದಲ್ಲಿ ಪೋಪ್‍ರ ಇರಾಕ್ ಸಂದರ್ಶನ ನಡೆಯುತ್ತಿದೆ. ಇರಾಕಿಗೆ ಹೊರಡುವ ಮೊದಲೇ ಪೋಪ್ ತಂಡದೆಲ್ಲರಿಗೂ ಚುಚ್ಚುಮದ್ದು ನೀಡಲಾಗುವುದು. ಅವರು ಮೂರು ದಿನಗಳ ಕಾಲ ಇರಾಕಿನಲ್ಲಿರುವರು .

ಇತ್ತೀಚೆಗೆ ಭಯೋತ್ಪಾದಕ ದಾಳಿ ಕಡಿಮೆ ಆಗಿದ್ದರೂ ಅವರಿಗೆ ಎಲ್ಲ ರೀತಿಯ ಸುರಕ್ಷೆಗಳನ್ನು ಒದಗಿಸುವುದಾಗಿ ಸರಕಾರ ಹೇಳಿದೆ. ಎಂಟು ವರ್ಷ ಕಾಲಾವಧಿಯಲ್ಲಿ ಪೋಪ್ ನಡೆಸುತ್ತಿರುವ 33ನೇ ವಿದೇಶಿ ಸಂದರ್ಶನ ಇದು. ಬಾಗ್ದಾದ್‍ನ ಅಧ್ಯಕ್ಷೀಯ ಅರಮನೆಯಲ್ಲಿ ಔತಣ ಸ್ವೀಕರಿಸುವುದರೊಂದಿಗೆ ಅವರ ಪರ್ಯಟನೆ ಆರಂಭವಾಗಲಿದೆ. ಅಧ್ಯಕ್ಷ ಬರ್‍ಹಾಮಗ ಸಾಲಿಹ್, ಪ್ರಧಾನಿ ಮುಸ್ತಫ ಅಲ್‍ ಖಾದ್ಮಿ ಇದರಲ್ಲಿ ಭಾಗವಹಿಸುವರು. ನಂತರ ಬಿಷಪ್‍ಗಳು, ಪಾದ್ರಿಗಳನ್ನು ಭೇಟಿಯಾಗುವರು.

ನಜಫ್‍ನ ಶಿಯಾ ಆಧ್ಯಾತ್ಮಿಕ ಗುರು ಆಯತ್ತುಲ್ಲ ಅಲಿ ಸಿಸ್ತಾನಿ, ಇರ್ಬಿಲ್, ಮೌಸಿಲ್, ಕರ್‍ಕುಷ್ ನಗರಗಳ ಕ್ರೈಸ್ತ ನಾಯಕರನ್ನು ಭೇಟಿಯಾಗುವರು. ಇಲ್ಲಿ ಕ್ರೈಸ್ತರ ವಿಷಯ ಚರ್ಚೆಗೆ ಬರಲಿದ್ದು ಚರ್ಚ್‌ಗಳ ನಿರ್ಮಾಣದ ಕುರಿತು ಪ್ರಸ್ತಾವವಾಗಲಿದೆ. ಮೌಸಿಲ್‍ನಲ್ಲಿ ಐಎಸ್‍ಗೆ ಬಲಿಯಾದ ಕ್ರೈಸ್ತ ಸಹೋದರರಿಗಾಗಿ ವಿಶೇಷ ಪ್ರಾರ್ಥನೆ ನಡೆಸುವರು. ಐಎಸ್ ನಾಶಪಡಿಸಿದ ಬಳಿಕ ಸೇಂಟ್ ಮೇರಿ ಅಲ್‍ ತಾಹಿರ ಚರ್ಚ್‌ಅನ್ನು ಮರುನಿರ್ಮಾಣ ಮಾಡಲಾಗಿದ್ದು ಅಲ್ಲಿಗೂ ಪೋಪ್ ಭೇಟಿ ನೀಡಲಿದ್ದಾರೆ. ಇರ್ಬಿಲ್ ಫುಟ್ಬಾಲ್ ಸ್ಟೇಡಿಯನಲ್ಲಿ ಕುರ್ಬಾನ ನಡೆಯಲಿದೆ. ಐಎಸ್ ಮುಷ್ಠಿಯು ಬಲಗೊಂಡ ನಂತರ ಇರಾಕಿನಲ್ಲಿ ಕಳೆದ ಒಂದೂವರೆ ವರ್ಷದಿಂದ ಕ್ರೈಸ್ತರ ಜನಸಂಖ್ಯೆ ಕುಸಿತವಾಗಿದೆ ಎಂಬುದಾಗಿ ವರದಿಗಳು ತಿಳಿಸಿವೆ.