ಡಾಲರ್ ಎದುರು ಮುಗ್ಗರಿಸಿದ ರೂಪಾಯಿ; ಈಗ ರಿಯಾಲ್‍ಗೆ 185 ರೂ.!

0
972

ಸನ್ಮಾರ್ಗ ವಾರ್ತೆ

ಮಸ್ಕತ್,ಆ.21: ಡಾಲರ್‌ನ ಎದುರು ರೂಪಾಯಿಯ ಮೌಲ್ಯ ಕುಸಿತ ಕಂಡ ಹಿನ್ನೆಲೆಯಲ್ಲಿ ಗಲ್ಫ್ ಕರೆನ್ಸಿಗಳ ವಿನಿಮಯ ದರ ಎತ್ತರಕ್ಕೇರಿದೆ. ಸೋಮವಾರ ಓಮನ್ ರಿಯಾಲ್‍ಗೆ 185ರೂಪಾಯಿವರೆಗೆ ಏರಿಕೆ ಕಂಡಿದೆ. ಸೋಮವಾರ ಬೆಳಗ್ಗೆ 184. 40 ರೂ. ನಂತರ 184.50ರೂ. ವರೆಗೆ ಇಂಡಿಯನ್ ರೂಪಾಯಿ ಇತ್ತು. ಸಂಜೆ ಮಾರುಕಟ್ಟೆ ಕೊನೆಗೊಳ್ಳುವಾಗ 185.20 ರೂಪಾಯಿಯನ್ನು ಧನ ವಿನಿಮಯ ಸಂಸ್ಥೆಗಳು ನೀಡಿದವು. ಆರು ತಿಂಗಳ ನಂತರ ವಿನಿಮಯ ದರ 185 ರೂಪಾಯಿಗೆ ತಲುಪಿದೆ. ಸೋಮವಾರ ಬೆಳಗ್ಗೆ ಡಾಲರ್ ಎದುರು 71.30 ರೂಪಾಯಿಯ ವಿನಿಮಯ ದರ ಇತ್ತು. ನಂತರ ಕುಸಿತವಾಗಿ 71.46ರೂಪಾಯಿವರೆಗೂ ತಲುಪಿತ್ತು.

ರೂಪಾಯಿಯ ಮೌಲ್ಯ ಕುಸಿತ ಮುಂದುವರಿಯುವ ಸಾಧ್ಯತೆ ಇದೆ ಎಂದು ಗ್ಲೋಬಲ್ ಮನಿ ಎಕ್ಸ್‌ಚೇಂಜ್ ಜನರಲ್ ಮ್ಯಾನೇಜರ್ ಆರ್.ಮಧುಸೂಧನ್ ತಿಳಿಸಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ರೂಪಾಯಿಯ ಮೌಲ್ಯ ಡಾಲರ್ ಎದುರು 72 ರೂಪಾಯಿ ವರೆಗೆ ಹೋಗಲಿದೆ. ರಿಯಾಲ್‍ಗೆ187ರೂಪಾಯಿವರೆಗೂ ಸಿಗಬಹುದಾಗಿದೆ. ಭಾರತ ಸರಕಾರ ವಿದೇಶ ಕರೆನ್ಸಿಯಲ್ಲಿ ಸಾವರಿನ್ ಬಾಂಡ್ ಹೊರತರಲು ಚಿಂತನೆ ನಡೆಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮಾತ್ರ ರೂಪಾಯಿಯ ಮೌಲ್ಯದಲ್ಲಿ ಸುಧಾರಣೆ ಕಾಣಬಹುದಾಗಿದೆ ಎಂದು ಮಧುಸೂಧನ್ ಹೇಳಿದರು.