ಗ್ಯಾನವಾಪಿ ಮಸೀದಿಯ ಸ್ಥಳದಲ್ಲಿ ಮಂದಿರದ ಅಸ್ತಿತ್ವ: ಇದು ಪುರಾತತ್ವ ಇಲಾಖೆಯ ಕುತಂತ್ರ ಎಂದ ಓವೈಸಿ

0
144

ಸನ್ಮಾರ್ಗ ವಾರ್ತೆ

ಗ್ಯಾನ್ ವಾಪಿ ಮಸೀದಿ ಇದ್ದ ಸ್ಥಳದಲ್ಲಿ ಈ ಹಿಂದೆ ಹಿಂದೂ ಮಂದಿರ ಅಸ್ತಿತ್ವದಲ್ಲಿತ್ತು ಎಂದು ಪುರಾತತ್ವ ಇಲಾಖೆ ಹೇಳಿರುವುದಾಗಿ ವರದಿಯಾಗಿದೆ. ಈ ಕುರಿತಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಐದು ಮಂದಿಯನ್ನು ಪ್ರತಿನಿಧಿಸುವ ನ್ಯಾಯವಾದಿ ಈ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ.

ಇದೇ ವೇಳೆ ಈ ವರದಿಯ ವಿರುದ್ಧ ಸಂಸದ ಅಸದುದ್ದೀನ್ ಒವೈಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದು ಸಂಪೂರ್ಣವಾಗಿ ಊಹಾಪೋಹವನ್ನು ಆಧರಿಸಿರುವ ಮತ್ತು ಐತಿಹಾಸಿಕ ಅಧ್ಯಯನವನ್ನು ಅವಮಾನಿಸುವ ವರದಿಯಾಗಿದೆ. ತಜ್ಞ ಪುರಾತತ್ವ ಸಂಶೋಧಕರ ಮುಂದೆಯೋ ಅಥವಾ ಇತಿಹಾಸದ ಬಗ್ಗೆ ಆಳ ಜ್ಞಾನ ಇರುವವರ ಎದುರೋ ಈ ವರದಿಯನ್ನು ಇಟ್ಟು ಪರಿಶೀಲಿಸಲಾಗಿಲ್ಲ. ಪುರಾತತ್ವ ಇಲಾಖೆಯು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಓರ್ವ ಮಹಾ ಪಂಡಿತರು ಈ ಮೊದಲು ನನ್ನೊಂದಿಗೆ ಹೇಳಿದ್ದರು ಎಂದು ಓವೈಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವರದಿಯ ಕೆಲವು ಭಾಗಗಳನ್ನು ನ್ಯಾಯವಾದಿ ಸೌರಭ ತಿವಾರಿ ದಿನಗಳ ಹಿಂದೆ ಬಿಡುಗಡೆಗೊಳಿಸಿದ್ದರು. ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಪುರಾತತ್ವ ಇಲಾಖೆ ಸಲ್ಲಿಸಿರುವ 839 ಪುಟಗಳ ವರದಿಯಲ್ಲಿ ಮಸೀದಿಯ ಕೆಳಗಡೆ ಹಿಂದು ಮಂದಿರವಿತ್ತು ಎಂದು ಹೇಳಲಾಗಿದೆ ಎಂದು ವರದಿಗಳು ಹೇಳಿವೆ.