ಸೆಕ್ಯುಲರ್, ಸೋಷಿಯಲಿಸ್ಟ್ ಎಂಬ ಪದಗಳಿಲ್ಲದ ಸಂವಿಧಾನ ಪೀಠಿಕೆಯ ಜಾಹೀರಾತು ನೀಡಿದ ಕೇಂದ್ರ ಸರ್ಕಾರ

0
134

ಸನ್ಮಾರ್ಗ ವಾರ್ತೆ

ಸೆಕ್ಯುಲರ್ ಮತ್ತು ಸೋಶಿಯಲಿಸ್ಟ್ ಎಂಬ ಪದಗಳಿಲ್ಲದ ಸಂವಿಧಾನದ ಜಾಹೀರಾತನ್ನು ಕೇಂದ್ರ ಸರಕಾರ ಪ್ರಕಟಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟು ಹಾಕಿದೆ. ಭಾರತದ ನಿಜವಾದ ಸಂವಿಧಾನ ಎಂದು ಈ ಜಾಹೀರಾತಿನಲ್ಲಿ ಹೇಳಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಮೊದಲು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಸಂವಿಧಾನವನ್ನು ನಾವು ರದ್ದು ಪಡಿಸುವುದಾಗಿ ಹೇಳಿರುವುದಾಗಿ ವಿವಾದ ಸೃಷ್ಟಿಯಾಗಿತ್ತು. ಸಂವಿಧಾನದ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಮತ್ತು ಅದು ಸಂವಿಧಾನಕ್ಕೆ ಭಿನ್ನವಾದ ತತ್ವ ಸಿದ್ಧಾಂತವನ್ನು ಜಾರಿಗೊಳಿಸಲು ಯತ್ನಿಸುತ್ತಿದೆ ಎಂಬ ಆರೋಪ ಇತ್ತು. ಇದೀಗ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ