ಸೈಕಲ್ ರೇಸ್ ನ ವೇಳೆ ಬೃಹತ್ ದುರಂತಕ್ಕೆ ಕಾರಣವಾದ ಪ್ರೇಕ್ಷಕ: ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತಾ?

0
1064

ಸನ್ಮಾರ್ಗ ವಾರ್ತೆ

ಫ್ರಾನ್ಸ್: ಫ್ರಾನ್ಸ್ ನ ಲ್ಯಾಂಡರ್ ನ್ಯೂ ಎಂಬಲ್ಲಿ ಮೂರು ವಾರಗಳ ಕಾಲ ಆಯೋಜಿಸಿರುವ ಟೂರ್ ಡೆ ಫ್ರಾನ್ಸ್‌ ನ ಸೈಕಲ್ ರೇಸ್ ನ ವೇಳೆ ಪ್ರೇಕ್ಷಕನೋರ್ವನ ಅಚಾತುರ್ಯದಿಂದ ಬೃಹತ್ ಅವಘಡ ಸಂಭವಿಸಿ, ಹಲವಾರು ಮಂದಿ ಸೈಕಲ್ ಸವಾರರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಅಷ್ಟಕ್ಕೂ ಪ್ರೇಕ್ಷಕ ಮಾಡಿದ್ದೇನೆಂದರೆ ರೇಸ್ ನಲ್ಲಿ ಭಾಗವಹಿಸಿದ್ದ ಸೈಕಲ್ ಸವಾರರು ಆಗಮಿಸುತ್ತಿದ್ದ ವೇಳೆಯಲ್ಲಿ ಟ್ರ್ಯಾಕ್ ನಲ್ಲಿ ನಿಂತು ಚಾನೆಲೊಂದರಲ್ಲಿ ಕಾಣುವ ಉದ್ದೇಶದಿಂದ ಪ್ಲೆ ಕಾರ್ಡ್ ನ್ನು ಹಿಡಿದು ಪೋಸ್ ಕೊಡಲು ನಿಂತಾಗ ಈ ದುರಂತ ಸಂಭವಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.

ರೇಸ್ ಮುಗಿಯಲು ಇನ್ನೂ 47 ಕಿ.ಮೀ. ಬಾಕಿ ಇರುವಾಗ ಪ್ರೇಕ್ಷಕನೋರ್ವ ಅಲ್ಲೆಜ್ ಒಪಿ-ಓಮಿ ಎಂದು ಜರ್ಮನಿ ಮತ್ತು ಫ್ರಾನ್ಸ್ ಭಾಷೆಯಲ್ಲಿ ಬರೆದ (ಗ್ರ್ಯಾಂಡ್‌ಡಾಡ್-ಗ್ರಾನ್ನಿ ಮೇಲೆ ಬನ್ನಿ) ಕಾರ್ಡ್ ಬೋರ್ಡ್ ಹಿಡಿದು ಟಿವಿ ಕ್ಯಾಮೆರಾಗಳನ್ನು ನೋಡುತ್ತಾ ಫೋಸ್ ಕೊಡುವಾಗ ಜರ್ಮನಿಯ ಸೈಕಲ್ ರೇಸ್ ನ ಸ್ಪರ್ಧಿ ಟೋನಿ ಮಾರ್ಟಿನ್ ಎಂಬ ಜರ್ಮನ್ ಸ್ಪರ್ಧಿ ನೇರವಾಗಿ ಬಂದು ಢಿಕ್ಕಿ ಹೊಡೆದು ನೆಲಕ್ಕುರುಳಿದರು. ಬಳಿಕ ಅವರ ಹಿಂಬದಿಯಲ್ಲಿ ಬರುತ್ತಿದ್ದ ನೂರಾರು ಮಂದಿ ಒಬ್ಬರ ಮೇಲೆ ಒಬ್ಬರು ಬಿದ್ದು ದೊಡ್ಡ ಪ್ರಮಾಣದ ಅವಘಡ ಸಂಭವಿಸಿತು.

ಘಟನೆಯಿಂದಾಗಿ ರೇಸ್ ಅನ್ನು ಐದು ನಿಮಿಷಗಳ ಕಾಲ ಸ್ಥಗಿತಗೊಳಿಸಲಾಯಿತು. ಅಲ್ಲದೇ ಗಾಯಗೊಂಡವರನ್ನು ವೈದ್ಯಕೀಯ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೀಡಿಯೋ ನೋಡಿ:

https://youtu.be/Hp0WM6pP7BE