ಕೃಷಿ ಕಾನೂನು: ಉದ್ಯಮಿಗಳು ಕೇಂದ್ರ ಸರಕಾರವನ್ನು ನಡೆಸುತ್ತಿದ್ದಾರೆ- ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್

0
436

ಸನ್ಮಾರ್ಗ ವಾರ್ತೆ

ರೇವಾ: ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಸಿಂಗ್ ಟಿಕಾಯತ್‌ರವರು ಭಾನುವಾರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಭೂಮಿಯನ್ನು ಕಸಿದುಕೊಂಡು ಹಣ ಸಂಪಾದಿಸುತ್ತಿದ್ದ ಉದ್ಯಮಿಗಳಿಂದ ಸರ್ಕಾರ ನಡೆಸಲಾಗುತ್ತಿದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.

ರೇವಾದಲ್ಲಿ ರೈತರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಟಿಕಾಯತ್, ಇದೀಗ ಹೊಸದಾಗಿ ಹಸಿವಿನ ವ್ಯಾಪಾರ ಶುರುವಾಗಿದೆ. ಮತ್ತು ಮನುಷ್ಯರು ದಿನಕ್ಕೆ ಎರಡು ಬಾರಿ, ವರ್ಷಕ್ಕೆ 700 ಬಾರಿ ಹಸಿವಿನಿಂದ ಬಳಲುತ್ತಿದ್ದಾರೆ. ಯಾಕೆಂದರೆ, ಉದ್ಯಮಿಗಳು ಆಹಾರ ಧಾನ್ಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ಹಸಿವಿನ ವ್ಯಾಪಾರವನ್ನು ಆರಂಭಿಸುತ್ತಿದ್ದಾರೆ” ಎಂದು ಟಿಕಾಯತ್ ನುಡಿದರು.

ರಾಜಸ್ಥಾನ ಮತ್ತು ಹರಿಯಾಣದಲ್ಲಿ ಉದ್ಯಮಿಗಳು ಅಲ್ಪ ಮೊತ್ತಕ್ಕೆ ಭೂಮಿಯನ್ನು ಖರೀದಿಸುತ್ತಿದ್ದು, 14 ಲಕ್ಷ ಮೆಟ್ರಿಕ್ ಟನ್ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಬೃಹತ್ ಗೋದಾಮುಗಳನ್ನು ನಿರ್ಮಿಸುತ್ತಿದ್ದಾರೆ. ಇದಕ್ಕಾಗಿಯೇ ಕೇಂದ್ರದ ಹೊಸ ಕೃಷಿ ಕಾನೂನುಗಳು ಬಂದವು ಎಂದು ಅವರು ಆರೋಪಿಸಿದರು.

ಕೇಂದ್ರದಲ್ಲಿನ ಈ ಸರ್ಕಾರವನ್ನು ಒಂದು ಪಕ್ಷ ನಡೆಸುತ್ತಿಲ್ಲ ಬದಲಾಗಿ ಉದ್ಯಮಿಗಳು ನಡೆಸುತ್ತಿದ್ದಾರೆ. ರೈತರು ಮಾತ್ರ ಈ ಸಂಕಷ್ಡಗಳನ್ನು ಎದುರಿಸುತ್ತಿಲ್ಲ, ಎಷ್ಟರವರೆಗೆಂದರೆ ರೈಲ್ವೆಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಆದರೆ ವಿರೋಧ ಪಕ್ಷ ದುರ್ಬಲವಾಗಿದ್ದು ಇದನ್ನು ವಿರೋಧಿಸಬೇಕಾದ ಯುವಕರು ನಿದ್ದೆ ಮಾಡುತ್ತಿದ್ದಾರೆ” ಎಂದು ಟಿಕಾಯತ್ ಹೇಳಿದರು.

ಹೊಸ ಕಾನೂನುಗಳನ್ನು ರದ್ದುಗೊಳಿಸಲು ಜನರು ಹೊರಬಂದು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಬೇಕೆಂದು ಅವರು ಕೇಳಿಕೊಂಡರು, ರೈತರು ಕಲೆಕ್ಟರೇಟ್‌ನಲ್ಲಿ ಕುಳಿತು ತಮ್ಮ ಗೋಧಿಯನ್ನು ಕ್ವಿಂಟಲ್‌ಗೆ 1,975 ರೂ.ಗೆ ಮಾರಾಟ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಟಿಕಾಯತ್ ಹೇಳಿದರು‌.