ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಕೋಲಾಹಲ ಸೃಷ್ಟಿಸಿ ರೈತ ನಾಯಕರ ಹತ್ಯೆಗೆ ಸಂಚು: ದುಷ್ಕರ್ಮಿಯನ್ನು ಸೆರೆಹಿಡಿದು ಪೊಲೀಸರಿಗೊಪ್ಪಿಸಿದ ರೈತರು

0
600

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರ ಸರಕಾರದ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು ಈ ನಡುವೆ ರೈತ ನಾಯಕರನ್ನು ಗುಂಡಿಟ್ಟು ಕೊಲ್ಲಲು ಯೋಜನೆ ರೂಪಿಸಿಲಾಗಿದೆ ಎಂದು ರೈತ ಸಂಘಟನೆಗಳು ಹೇಳಿವೆ. ನಾಲ್ವರು ರೈತ ನಾಯಕರ ಕೊಲೆಗೆ ಎರಡು ತಂಡಗಳನ್ನು ನೇಮಿಸಲಾಗಿದ್ದು ಗಣರಾಜ್ಯೋತ್ಸವದಂದು ರೈತರು ನಡೆಸುವ ಟ್ರಾಕ್ಟರ್ ರ್ಯಾಲಿಯನ್ನು ತಡೆಯುವುದು ಉದ್ದೇಶವಾಗಿತ್ತು ಎಂದು ದುಷ್ಕರ್ಮಿಯು ಮಾಧ್ಯಮಗಳ ಮುಂದೆ ತಿಳಿಸಿದ್ದಾನೆ.

ಶುಕ್ರವಾರ ಸಂಜೆ ದಿಲ್ಲಿಯ ಸಿಂಘು ಗಡಿಯಲ್ಲಿ ರೈತ ನಾಯಕರನ್ನು ಆಕ್ರಮಿಸಲು ಬಂದ ವ್ಯಕ್ತಿಯನ್ನು ಶುಕ್ರವಾರ ರಾತ್ರೆ ರೈತರು ಸೆರೆಹಿಡಿದಿದ್ದಾರೆ. ನಂತರ ಮುಖವಾಡ ಹಾಕಿ ಈ ವ್ಯಕ್ತಿಯನ್ನು ರೈತರು ಮಾಧ್ಯಮಗಳ ಮುಂದೆ ಪ್ರದರ್ಶಿಸಿ ಉನ್ನತ ಪೊಲೀಸಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ರೈತರ ಹೋರಾಟವನ್ನು ದಮನಿಸಲು ಶ್ರಮಿಸಲಾಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದು, ಈ ಘಟನೆ ಅದನ್ನು ಸರಿಯೆಂದು ಶುಕ್ರವಾರದ ಘಟನೆ ನಿರೂಪಿಸಿದೆ. ಟ್ರಾಕ್ಟರ್ ರ್ಯಾಲಿ ತಡೆಯುವುದಕ್ಕಾಗಿ ನಡೆದಿರುವ ಸಂಚಿನಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ರೈತರು ಹಿಡಿದು ತಂದ ದುಷ್ಕರ್ಮಿ ಮಾಧ್ಯಮಗಳೊಂದಿಗೆ ಮಾತಾಡಿದ್ದು ಜನುವರಿ 26ರ ಟ್ರಾಕ್ಟರ್ ರ್ಯಾಲಿಯನ್ನು ಬುಡಮೇಲುಗೊಳಿಸುವುದು ಯೋಜನೆಯಾಗಿತ್ತು ಎಂದು ಹೇಳಿದ್ದಾನೆ.

ಪೊಲೀಸರ ಉಡುಗೆಯಲ್ಲಿ ರೈತರ ರ್ಯಾಲಿಗೆ ಬರುವ ಒಂದು ಡಝನ್‍ನಷ್ಟು ಈ ತಂಡದ ಸದಸ್ಯರು ರೈತರನ್ನು ದಾರಿತಪ್ಪಿಸಲಿದ್ದಾರೆ. ಗುಂಡಿಟ್ಟು ಹತ್ಯೆ ಮಾಡಬೇಕಾದ ನಾಲ್ಕು ಮಂದಿಯ ಫೋಟೊ ಕೊಡಲಾಗಿದೆ. ತಮ್ಮನ್ನು ನಿಯಂತ್ರಿಸುವವರಲ್ಲಿ ಒಬ್ಬ ಪೊಲೀಸಧಿಕಾರಿ ಇದ್ದಾನೆ ಎಂದು ದುಷ್ಕರ್ಮಿ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಎರಡು ತಂಡಗಳನ್ನಾಗಿ ಮಾಡಿ ಹೊಣೆ ಕೊಡಲಾಗಿದೆ. ಜನವರಿ 19ರಿಂದಲೇ ತಾನು ಪ್ರತಿಭಟನಾ ಸ್ಥಳದಲ್ಲಿದ್ದೇನೆ. ಪ್ರತಿಭಟನಾಕಾರರ ಕೈಯಲ್ಲಿ ಆಯುಧ ಇದೆಯೇ ಎಂದು ತಿಳಿಯಲು ತನಗೆ ಆದೇಶಿಸಲಾಗಿದೆ ಎಂದು ದುಷ್ಕರ್ಮಿ ಹೇಳಿದನು.

ಜನವರಿ 26ಕ್ಕೆ ರ್ಯಾಲಿ ನಡೆಯುವಾಗ ರೈತರು ವಾಪಾಸು ಹೋಗುವಂತೆ ಮೊದಲು ಪೊಲೀಸರು ಮುನ್ನೆಚ್ಚರಿಕೆ ನೀಡುತ್ತಾರೆ. ನಂತರವೂ ವಾಪಾಸು ಹೋಗಲು ಸಿದ್ಧವಾಗದಿದ್ದರೆ ಮೊದಲು ಮೊಣಕಾಲಿನ ಕೆಳಗೆ ಗುಂಡು ಹಾರಿಸಲು ಆದೇಶ ನೀಡಲಾಗಿತ್ತು. ಪ್ರತಿಭಟನೆಯಲ್ಲಿ ರೈತರು ಬಂದೂಕು ಉಪಯೋಗಿಸುತ್ತಿದ್ದಾರೆ ಎಂದು ತೋರಿಸಲು ಹತ್ತು ಮಂದಿಯ ತಂಡ ಹಿಂದಿನಿಂದ ಗುಂಡು ಹಾರಿಸಲಿದೆ ಎಂದು ದುಷ್ಕರ್ಮಿ ತಿಳಿಸಿದನು. ಇದಕ್ಕೆ ತನಗೆ 10,000ರೂಪಾಯಿ ಕೊಡುವುದಾಗಿ ಹೇಳಿದ್ದಾರೆ ಎಂದು ಆತ ವಿವರವನ್ನು ಬಹಿರಂಗಪಡಿಸಿದ್ದಾನೆ.

ಪ್ರತಿಭಟನೆಯ ಸ್ಥಳದಲ್ಲಿ ರೈತರು ಓರ್ವ ಹುಡುಗಿಯ ಅತ್ಯಾಚಾರಕ್ಕೆ ಶ್ರಮಿಸಿದ್ದಾರೆ ಎಂದು ಆರೋಪಿಸಿ ಆಂದೋಲನದ ಕೆಟ್ಟ ಅಭಿಪ್ರಾಯ ಮೂಡಿಸುವುದು ದುಷ್ಕರ್ಮಿಯ ಮೊದಲ ಪ್ರಯತ್ನವಾಗಿತ್ತು ಎಂದು ಭಾರತ್ ಕಿಸಾನ್ ಮೋರ್ಚಾದ ನಾಯಕ ಜಗ್‍ಜಿತ್ ಸಿಂಗ್ ಹೇಳಿದರು. ಅವನನ್ನು ಹಿಡಿದಾಗ ಪ್ರತಿಭಟನಾಕಾರರಲ್ಲಿ ಆಯುಧ ಇದೆಯೇ ಎಂದು ಅರಿತುಕೊಳ್ಳಲು ಬಂದಿದ್ದೇನೆ ಎಂದು ಈತ ಹೇಳಿದ್ದ. ನಂತರ ಹೆಚ್ಚು ಪ್ರಶ್ನಿಸಿದಾಗ ಈತ ಸತ್ಯವನ್ನು ಬಹಿರಂಗಪಡಿಸಿದ್ದಾರನೆ ಎಂದು ಹೇಳಿದರು.

ಇದೇ ವೇಳೆ ಮುಖವಾಡ ಧರಿಸಿದ ವ್ಯಕ್ತಿಯ ಕುರಿತು ಹೆಚ್ಚಿನ ವಿವರ ಗೊತ್ತಿಲ್ಲ . ಈವರೆಗೆ ಅಧಿಕೃತ ದೂರು ಬಂದಿಲ್ಲ ಎಂದು ದಿಲ್ಲಿ ಪೊಲೀಸರು ತಿಳಿಸಿದರು. ದುಷ್ಕರ್ಮಿಯನ್ನು ರೈತರು ಹರಿಯಾಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಹೆಚ್ಚಿನ ತನಿಖೆಗೆ ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.