ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಭಾರತದ 5.62 ಲಕ್ಷ ಫೇಸ್‍ಬುಕ್ ಬಳಕೆದಾರರ ವಿವರಗಳನ್ನು ಸೋರಿಕೆ ಮಾಡಿದ ಕೇಂಬ್ರಿಜ್ ಅನಾಲಿಟಿಕಾ ಲಿಮಿಟೆಡ್ ಮತ್ತು ಗ್ಲೋಬೆಲ್ ಸೈನ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸಿಬಿಐ ತನಿಖೆ ಮಾಡಲಿದೆ. 2018ರಲ್ಲಿ ಸಿಬಿಐ ಆರಂಭಿಸಿದ ಪ್ರಾಥಮಿಕ ತನಿಖೆಯ ವಿವರಗಳ ಆಧಾರದಲ್ಲಿ ಸೋರಿಕೆಗೆ ಸಂಬಂಧಿಸಿದ ಆರೋಪಗಳು ಸತ್ಯವಾದುದು ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಇಂಗ್ಲೆಂಡಿನ ಎರಡು ಕಂಪೆನಿಗಳ ವಿರುದ್ಧ ತನಿಖೆಗೆ ನಡೆಯಲಿದೆ.
ದೇಶದ ಚುನಾವಣೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ವಿವರವನ್ನು ಕದ್ದಿರುವುದು. ದುರುಪಯೋಗಿಸಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ ಗೂಢಾಲೋಚನೆ, ಸೈಬರ್ ಅಪರಾಧ ಹೊರಿಸಿ ದೂರು ದಾಖಲಿಸಿಕೊಳ್ಳಲಾಗಿದೆ.
5.6 ಲಕ್ಷ ಭಾರತೀಯ ಫೇಸ್‍ಬುಕ್ ಬಳಕೆದಾರರ ವಿವರಗಳನ್ನು ಕಾನೂನಿಗೆ ವಿರುದ್ಧವಾಗಿ ಸೋರಿಕೆಯಾಗಿದ್ದನ್ನು ಫೇಸ್‍ಬುಕ್ ಸಿಬಿಐ ಮುಂದೆ ಒಪ್ಪಿಕೊಂಡಿತ್ತು. ಗ್ಲೋಬಲ್ ಸಯನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾದ ಅಲಕ್ಸಾಂಡರ್ ಕೋಗನ್ ದಿಸ್ ಈಸ್ ಯುವರ್ ಡಿಜಿಟಲ್ ಲೈಫ್ ಎಂಬ ಆಫ್ಲಿಕೇಶನ್ ಮೂಲಕ ವಿವರವನ್ನು ಸೋರಿಕೆ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ.
ಅಕಾಡಮಿಕ್, ಸಂಶೋಧನೆ ಅಗತ್ಯವಿರುವ ವಿವರಗಳನ್ನು ಆಪ್ಲಿಕೇಶನ್ ಸಂಗ್ರಹಿಸುವುದು ಎಂದು ಹೇಳಿ ಸೋರಿಕೆ ಮಾಡಲಾಗಿತ್ತು. ಆದರೆ ವ್ಯಕ್ತಿಯ ವಿವರಗಳನ್ನು ಸೋರಿಕೆ ಮಾಡಿ ದುರುಪಯೋಗಿಸಲಾಯಿತು. ಫೇಸ್‍ಬುಕ್ ಬಳಕೆದಾರರು ಅವರ ಸೌಹಾರ್ದ ವಲಯದಲ್ಲಿರುವವರ ವಿವರಗಳನ್ನು ಈ ರೀತಿ ಸೋರಿಕೆ ಮಾಡಲಾಗಿದೆ ಎಂದು ಸಿಬಿಐ ಎಫ್‍ಐಆರ್ ದಾಖಲಿಸಿದೆ.












