ಕೃಷಿ ಸಚಿವರಿಲ್ಲದ ಕೇಂದ್ರ ಸಭೆ: ಕೃಷಿ ಮಸೂದೆ ಪ್ರತಿಗಳನ್ನು ಹರಿದು ಸಭಾ ತ್ಯಾಗ ಮಾಡಿದ ರೈತರು

0
419

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.14: ರೈತ ಹೋರಾಟಕ್ಕೆ ಪರಿಹಾರ ಕಂಡು ಹುಡುಕುವುದಕ್ಕಾಗಿ ಕೇಂದ್ರ ಸರಕಾರ ಕರೆದಿದ್ದ ಸಭೆಯಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್‌ರ ಭಾಗಿತ್ವವಿಲ್ಲದುದರಿಂದ ರೈತರು ಸಭೆಯಿಂದ ಹೊರ ನಡೆದಿದ್ದಾರೆ.

ವಿವಾದಿತ ರೈತ ಮಸೂದೆಯ ಪ್ರತಿಗಳನ್ನು ರೈತರು ಸಚಿವಾಲಯದ ಒಳಗೆ ಹರಿದು ವಿರೋಧಿ ಘೋಷಣೆ ಕೂಗಿದರು.

ಕೃಷಿ ಸಚಿವರ ಬದಲಿಗೆ ಕೇಂದ್ರ ಕೃಷಿ ಕಾರ್ಯದರ್ಶಿ ಸಭೆಗೆ ಬಂದಿದ್ದರು. ಆದರೆ ಕೃಷಿ ಸಚಿವರು ಬಂದರೆ ಮಾತ್ರ ಚರ್ಚೆಗೆ ಸಿದ್ಧ ಎಂದು ರೈತರು ನಿಲುವು ವ್ಯಕ್ತಪಡಿಸಿದರು.

ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆಯನ್ನು ಬಲಿಷ್ಠಗೊಳಿಸಲಾಗುವುದು ಎಂದು ರೈತರು ಹೇಳಿದ್ದಾರೆ. ರೈತರನ್ನು ಕಾರ್ಪೊಟಿಗರ ಗುಲಾಮರನ್ನಾಗಿಸುವ ಕಾನೂನು ವಿರುದ್ಧ ಪಂಜಾಬ್, ಹರಿಯಾಣ ಮೊದಲಾದ ಉತ್ತರ ಭಾರತ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಸರಕಾರ ರೈತರ ಸಮಸ್ಯೆಯನ್ನು ಅತ್ಯಂತ ನಿರಾಸಕ್ತಿಯಿಂದ ನೋಡುತ್ತಿದೆ ಎಂದು ರೈತರ ಒಂದು ವಿಭಾಗ ಬೆಟ್ಟು ಮಾಡಿದೆ.