ಹತ್ರಸ್ ಪ್ರಕರಣ: ಸುಪ್ರೀಂ ಕೋರ್ಟ್ ಮೇಲ್ನೋಟದಲ್ಲಿ ಸಿಬಿಐ ತನಿಖೆ

0
430

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.14: ಹಾಥ್ರಸ್ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಯಲ್ಲಿ ಸುಪ್ರೀಮ್ ಕೋರ್ಟ ಮೇಲ್ನೋಟ ವಹಿಸಬೇಕೆಂದು ಉತ್ತರಪ್ರದೇಶ ಸರಕಾರ ಆಗ್ರಹಿಸಿದೆ. ಬಾಲಕಿಯ ಕುಟುಂಬಕ್ಕೂ ಪ್ರಕರಣದ ಸಾಕ್ಷಿಗಳಿಗೂ ಎಲ್ಲ ರೀತಿಯ ಸುರಕ್ಷೆ ನೀಡಲು ಸರಕಾರ ಬದ್ಧ ಎಂದು ಸರಕಾರ ಕೋರ್ಟಿಗೆ ತಿಳಿಸಿತು.

ಮೂರು ಸ್ಥರದ ಸುರಕ್ಷೆ ಬಾಲಕಿಯ ಕುಟುಂಬಕ್ಕೆ ನೀಡಲಾಗಿದೆ. ಗ್ರಾಮದಲ್ಲಿ ಸಿಸಿಟಿವಿಗಳನ್ನು ಸ್ಥಾಪಿಸಲಾಗಿದೆ. ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಸರಕಾರ ಅಫಿದಾವಿತ್‍ನಲ್ಲಿ ತಿಳಿಸಿದೆ. ಬಾಲಕಿಯ ಕುಟುಂಬಕ್ಕೆ ಸುರಕ್ಷೆಗಾಗಿ ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದು ಅದು ತಿಳಿಸಿತು. ಪ್ರಕರಣದ ಸಿಬಿಐ ತನಿಖೆ ಆರಂಭವಾಗಿದೆ. ತಾತ್ಕಾಲಿಕವಾಗಿ ಸಿದ್ಧಪಡಿಸಿದ ಕಚೇರಿಯಲ್ಲಿ ಇಂದು ಬಾಲಕಿಯ ಕುಟುಂಬ ಸದಸ್ಯರ ಹೇಳಿಕೆ ಪಡೆದುಕೊಳ್ಳಲಿದೆ.