ಗಣರಾಜ್ಯೋತ್ಸವದಂದು ಒಂದು ಸಾವಿರ ಟ್ರ್ಯಾಕ್ಟರ್ ಗಳು ಭಾಗವಹಿಸುವ ನಿರೀಕ್ಷೆ: ರೈತ ಮುಖಂಡ ಕಿಶನ್ ಸಿಂಗ್

0
571

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಗಣರಾಜ್ಯೋತ್ಸವ ದಿನದಂದು ರೈತರು ಹಮ್ಮಿಕೊಂಡಿರುವ ಬೃಹತ್ ರ‌್ಯಾಲಿಯಲ್ಲಿ ಕನಿಷ್ಠ 1,000 ಟ್ರಾಕ್ಟರ್ ಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ರೈತ ಮುಖಂಡ ಕಿಶನ್ ಸಿಂಗ್ ಬ್ರಾರ್ ಹೇಳಿದ್ದಾರೆ.

ಜನವರಿ 26 ರ ಪ್ರತಿಭಟನೆಯ ಕಾರ್ಯಕ್ರಮದ ಬಗ್ಗೆ ಚರ್ಚಿಸಲು ರೈತರು ಪೊಲೀಸರನ್ನು ಭೇಟಿ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ‌್ಯಾಲಿಯಿಂದ ನಾವು ಯಾರಿಗೂ ತೊಂದರೆ ನೀಡುತ್ತಿಲ್ಲ. ನಮ್ಮ ಸಮಸ್ಯೆ ಜನರಿಗೆ ತಿಳಿಯಬೇಕು ಎಂದು ರೈತರು ತಿಳಿಸಿದ್ದಾರೆ.

ಗಣರಾಜ್ಯೋತ್ಸವದಂದು ಇಂತಹ ರ‌್ಯಾಲಿಯು ರಾಷ್ಟ್ರವನ್ನು ಮುಜುಗರಕ್ಕೀಡು ಮಾಡುತ್ತದೆ ಎಂದು ಸರಕಾರ ರ‌್ಯಾಲಿಯನ್ನು ವಿರೋಧಿಸಿದೆ.

ಸರ್ಕಾರದ ಮೇಲ್ಮನವಿಯ ಹೊರತಾಗಿಯೂ, ಟ್ರ್ಯಾಕ್ಟರ್ ರ‌್ಯಾಲಿಯ ಬಗ್ಗೆ ನಿಲುವು ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತಲ್ಲದೇ, ದೆಹಲಿ ಪೊಲೀಸರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದೆ.

ಸರ್ಕಾರ ಮತ್ತು ರೈತರ ನಡುವೆ ಮುಂದಿನ ಸಭೆ ಜನವರಿ 22 ರಂದು ನಡೆಯಲಿದೆ.