BSNL ಆತ್ಮನಿರ್ಭರ್: 4ಜಿ ನೆಟ್‍ವರ್ಕ್ ಅಭಿವೃದ್ಧಿಗೆ ಭಾರತೀಯ ಕಂಪೆನಿಗಳು

0
358

ಸನ್ಮಾರ್ಗ ವಾರ್ತೆ

ತೃಶೂರ್: ಬಿಎಸ್‌ಎನ್‌ಎಲ್ 4ಜಿ ನೆಟ್‍ವರ್ಕ್ ಅಭಿವೃದ್ಧಿಗೆ ಭಾರತದ ಕಂಪೆನಿಗಳು ಸಿದ್ಧವಾಗಿದ್ದು ಎಚ್.ಎಫ್.ಸಿ‌.ಎಲ್, ತೇಜಸ್ ನೆಟ್‍ವರ್ಕ್, ಸ್ಟಾರ್ಲೈಟ್ ಟೆಕ್ನಾಲಜೀಸ್, ಪೊಲಿಕಾಂಬ್ ಇಂಡಿಯಾ, ಎಲ್‍ ಆಂಡ್ ಟಿ, ಎಚ್‍ಸಿಎಲ್ ಮತ್ತು ಸಾರ್ವಜನಿಕ ಕ್ಷೇತ್ರದ ಸಂಸ್ಥೆ ಐಟಿಐ ಟೆಲಿಕಮ್ಯೂನಿಕೇಶನ್ ಕನ್ಸಲ್ಟೆಂಟ್ ಇಂಡಿಯಾ ಇದಕ್ಕಾಗಿ ಮುಂದೆ ಬಂದಿದೆ.

ಕೇಂದ್ರ ಸರಕಾರದ ಆತ್ಮನಿರ್ಭರ್ ಯೋಜನೆ ಪ್ರಕಾರ 4ಜಿ ಉಪಕರಣಗಳನ್ನು ಅಭಿವೃದ್ಧಿ ಪಡಿಸಲು ಇಂಡಿಯನ್ ಕಂಪೆನಿಗಳಿಂದ ಬಿಎಸ್‍ಎನ್‍ಎಲ್ ಅರ್ಜಿ ಆಹ್ವಾನಿಸಿತ್ತು. 4ಜಿ ಸ್ಪರ್ಧೆಯಲ್ಲಿ ವಿದೇಶಿ ಕಂಪೆನಿಗಳಾದ ಸ್ಯಾಮ್ಸಂಗ್, ನೋಕಿಯಾ, ಎರಿಕ್ಸನ್ ಮುಂತಾದವು ಇದ್ದರೂ ವಿದೇಶಿ ಕಂಪೆನಿಗಳ ಪಾಲುದಾರಿಕೆ ಬಿಎಸ್‍ಎನ್‍ಎಲ್‍ಗೆ ಬೇಡ ಎಂಬ ನಿಲುವನ್ನು ಕೇಂದ್ರ ಸರಕಾರ ಮತ್ತು ಟೆಲಿಕಾಂ ಸಚಿವಾಲಯ ಹೊಂದಿದೆ. ಇದೇ ವೇಳೆ, ತೇಜಸ್ ನೆಟ್‍ವರ್ಕ್ ಅಭಿವೃದ್ಧಿ ಪಡಿಸಿದ 4ಜಿ ಕೋರ್, ರೇಡಿಯೊ ನೆಟ್‍ವರ್ಕ್ ಬಿಎಸ್‌ಎನ್‌ಎಲ್‌ಗಾಗಿ ಪರೀಕ್ಷಾರ್ಥ ನೀಡುವುದಕ್ಕಾಗಿ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್‌ನೊಂದಿಗೆ(ಸಿ-ಡಾಟ್) ಸಹಕರಿಸಿಲು ಐಟಿಐ ಸಿದ್ಧವಾಗಿದೆ.

4ಜಿ ಅಭಿವೃದ್ಧಿ ಪಡಿಸಲು ಸಿದ್ಧವಿರುವ ಭಾರತೀಯ ಕಂಪೆನಿಗಳಿಗೆ ತಾಂತ್ರಿಕ ಬೆಂಬಲ ಕೊಡಲು ಐಟಿಐ ಮುಂದೆ ಬಂದಿದೆ. ಟೆಕ್‍ ಮಹೀಂದ್ರಾ, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಹಕರಿಸಲು ಶ್ರಮಿಸುತ್ತಿದೆ. ಚೀನ, ಪಾಕಿಸ್ತಾನ ಗಡಿ ರಾಜ್ಯಗಳ ತಂತ್ರಜ್ಞಾನ ಉಪಯೋಗಿಸಿ ಬಿಎಸ್‌ಎನ್‌ಎಲ್ 4ಜಿ ಸೇವೆ ತರುವುದನ್ನು ಕೇಂದ್ರ ಸರಕಾರ ನಿಷೇಧಿಸಿದ ನಂತರ ಭಾರತೀಯ ಕಂಪೆನಿಗಳ ಹುಡುಕಾಟ ಆರಂಭವಾಗಿತ್ತು. ಆರಂಭದಲ್ಲಿ 57,000 4ಜಿ ಸೆಟ್‍ಗಳ ಅಭಿವೃದ್ಧಿಗೆ ಅರ್ಜಿ ಕರೆಯಲಾಗಿದೆ.