ರೈತರ ಹೋರಾಟ: ಮುಂದುವರಿದ ಜಿಯೊ ಟವರ್ ಧ್ವಂಸ ಕಾರ್ಯ; ಒತ್ತಡದಲ್ಲಿ ಪಂಜಾಬ್ ಸರಕಾರ

0
396

ಸನ್ಮಾರ್ಗ ವಾರ್ತೆ

ಅಮೃತಸರ,ಡಿ.30: ಪಂಜಾಬ್ ಜಿಯೊ ಟವರ್‌ಗಳ ನಾಶಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಂಜಾಬ್ ಸರಕಾರ ಹೇಳಿದ್ದು, ಇದರ ನಡುವೆ ಹೊಸ ರೈತ ಕಾನೂನಿನ ಅತ್ಯಂತ ದೊಡ್ಡ ಫಲಾನುಭವಿ ಎನ್ನಲಾದ ರಿಲಯನ್ಸ್ ವಿರುದ್ಧ ರೈತರ ರೋಷ ಮುಂದುವರಿದಿದೆ.

ರಿಲಯನ್ಸ್ ಟವರ್‌ಗಳನ್ನು ನಾಶಪಡಿಸುವ ಮತ್ತು ವಿದ್ಯುತ್ ಕಡಿತಗೊಳಿಸುವ ಕಾರ್ಯ ಮುಂದುವರಿದಿದೆ. ರಿಲಯನ್ಸ್ ಜಿಯೊ ಇನ್ಫೊಕಾಮ್‍ನ 2000 ಸೆಲ್‍ಫೋನ್ ಟವರ್‌ಗಳಿಗೆ ಇದುವರೆಗೆ ಹಾನಿ ಸಂಭವಿಸಿದೆ.

ಇದೇ ವೇಳೆ ,ಟವರ್‌ಗಳನ್ನು ನಾಶಪಡಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದರು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಬಿಡುವುದಿಲ್ಲ ಎಂದು ಅವರು ಹೇಳಿದ್ದರು. ಟವರ್‌ಗಳಿಗೆ ವಿದ್ಯುತ್ ಸಂಪರ್ಕ ಮರುಸ್ಥಾಪಿಸುವ ಕಾರ್ಯಕ್ಕೆ ಪೊಲೀಸರು ನೇತೃತ್ವ ನೀಡುತ್ತಿದ್ದು ಟವರ್‌ಗಳಿಗೆ ರಕ್ಷಣೆ ನೀಡುವುದಕ್ಕಾಗಿ ಪೊಲೀಸರ ಪಟ್ರೋಲಿಂಗ್ ತಂಡವನ್ನು ಜಿಲ್ಲಾ ಪೊಲೀಸಧಿಕಾರಿ ರಚಿಸಿದ್ದಾರೆ. ಶೇ.80ರಷ್ಟು ಟವರ್‌ಗಳು ಈಗ ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸರು ತಿಳಿಸಿದರು.