9 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರ ವೇತನ ಹೆಚ್ಚಳ: ತೆಲಂಗಾಣ ಸಿ.ಎಂ.ಚಂದ್ರಶೇಖರ್ ರಾವ್ ಘೋಷಣೆ

0
391

ಸನ್ಮಾರ್ಗ ವಾರ್ತೆ

ತೆಲಂಗಾಣ: ರಾಜ್ಯದ ಒಟ್ಟು 9,36,976 ಸರ್ಕಾರಿ ನೌಕರರ ವೇತನವನ್ನು ರಾಜ್ಯ ಸರ್ಕಾರ ಹೆಚ್ಚಿಸಲಿದೆ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ.

ಸರ್ಕಾರವು ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದಲ್ಲದೆ, ಭಡ್ತಿ ನೀಡುತ್ತದೆ ಹಾಗೂ ಅಗತ್ಯವಿರುವ ವರ್ಗಾವಣೆಗಳನ್ನು ಮಾಡುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ನಿವೃತ್ತಿ ದಿನದಂದು ನೌಕರರಿಗೆ ಎಲ್ಲಾ ರೀತಿಯ ಪ್ರಯೋಜನಗಳನ್ನು ನೀಡಲಾಗುವುದು ಎಂದಿರುವ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಎಲ್ಲಾ ಇಲಾಖೆಗಳಲ್ಲಿ ಈಗಾಗಲೇ ಖಾಲಿ ಹುದ್ದೆಗಳನ್ನು ಗುರುತಿಸಲಾಗುವುದು ಮತ್ತು ನೇಮಕಾತಿ ಪ್ರಕ್ರಿಯೆ ಫೆಬ್ರವರಿಯಿಂದ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.