‘ವೆಸ್ಟ್ ಬ್ಯಾಂಕ್ ಮತ್ತು ಗಾಝ ಪಟ್ಟಿಯನ್ನು ಹೊಸ ಸರ್ಕಾರ ಆಳಲಿದೆ’ ಎಂದ ಫತಹ್

0
548

“ಮುಂಬರುವ ಸರ್ಕಾರ, ಹಮಾಸ್ ಮತ್ತು ಇತರ ಅನೇಕ ಪ್ಯಾಲಸ್ತೀನಿ ಬಣಗಳನ್ನು ಹಿಂದಿಟ್ಟು ಪಶ್ಚಿಮ ತೀರ ಮತ್ತು ಗಾಝ ಪಟ್ಟಿಯನ್ನು ಆಳಲಿದೆ” ಎಂದು ಫತಹ್ ಹೇಳಿರುವುದಾಗಿ ಅಲ್-ವತನ್ ವಾಯ್ಸ್ ವರದಿ ಮಾಡಿದೆ.

ಹೊಸ ಸರ್ಕಾರವು ಏಕತೆಗಾಗಿ ನೋಡುತ್ತಿದ್ದು, ಅದಕ್ಕೆ ಪ್ರತಿಕೂಲವಾಗಿರುವ ಯಾರಾದರೂ “ಫೆಲಸ್ತೀನಿಯರ ಶತ್ರುವಾಗಿರಬೇಕು” ಎಂದು ಫತಹ್ ಒತ್ತಿ ಹೇಳಿದೆ. ಕುರಿತು ಮಾತನಾಡಿದ ಫತಹ್ ನ ಅಧಿಕೃತ ವಕ್ತಾರರಾದ ಅತೀಖ್ ಅಬು-ಸೈಫ್ “ನಾವು ಜನರ ಸೇವೆ ಮಾಡಲು ಬಯಸುತ್ತೇವೆ; ಆದ್ದರಿಂದ,ನಾವು ಸರಕಾರವನ್ನು ರಚಿಸಲು ಇಚ್ಛಿಸುತ್ತೇವೆ. ರಾಷ್ಟ್ರೀಯ ಒಮ್ಮತದಿಂದ ಹೊರಗುಳಿಯಲು ಬಯಸುವವರ ಕುರಿತು ನಾವು ಕಿಂಚಿತ್ತೂ ಚಿಂತಿತರಾಗಿಲ್ಲ. ಈ ಸರ್ಕಾರ ವೆಸ್ಟ್ ಬ್ಯಾಂಕ್, ಜೆರುಸಲೆಮ್, ಗಾಝ ಪಟ್ಟಿ ಮತ್ತು ವಲಸಿಗ ಫೇಲಸ್ತೀನಿಯನ್ನರಿಗಾಗಿರುತ್ತದೆ. ಈ ಸರಕಾರಕ್ಕೆ ಹಮಾಸ್ ನೊಂದಿಗೆ ಯಾವುದೇ ಸಂಬಂಧವಿಲ್ಲ'”ಎಂದರು.

“ಫೆಲಸ್ತೀನಿಯನ್ ವಿಮೋಚನಾ ಸಂಸ್ಥೆಯು(PLO) ಫೆಲಸ್ತೀನಿಯನ್ ಅಥಾರಿಟಿಯ (PA) ಪಾಲಕನಾಗಿದ್ದು, ಅದು ಎಲ್ಲಾ ಫೆಲಸ್ತೀನಿಯನ್ ಜನರನ್ನು ಪ್ರತಿನಿಧಿಸುತ್ತದೆ.ಈ ಸರ್ಕಾರವು ಎಲ್ಲಾ ಫೇಲಸ್ತೀನಿಯನ್ನರನ್ನು ಪ್ರತಿನಿಧಿಸುತ್ತದೆ ಏಕೆಂದರೆ ಇದು ಪಿಎಲ್ಓ ನಲ್ಲಿದ. ಯಾರಾದರೂ ಇದಕ್ಕೆ ತಡೆಯೊಡ್ಡಲು ಮುಂದಾದರೆ, ಅವರು ಫೇಲಸ್ತೀನಿಯನರಿಗೆ, ಪಿಎಲ್ಓ ಮತ್ತು ಫೇಲಸ್ತೀನ್ ರಾಷ್ಟ್ರಕ್ಕೆ ಅಡ್ಡಿಪಡಿಸುತ್ತಿದ್ದರೆಂದಾಗಿದೆ. ಸರ್ಕಾರವು ಚುನಾವಣೆಯನ್ನು ಕೈಗೊಳ್ಳುತ್ತದೆ ಮತ್ತು ವಿಶ್ವ ಸಂಸ್ಥೆಯಲ್ಲಿ ಪ್ಯಾಲಸ್ತೀನ್ ನ ಸ್ಥಾನಮಾನವನ್ನು ಹೆಚ್ಚಿಸುತ್ತದೆ ಮತ್ತು ಪ್ಯಾಲಸ್ತೀನಿಯದ ಜನರಿಗೆ ಸೇವೆ ಸಲ್ಲಿಸುವ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಹಮಾಸ್ ನ ಅಡೆತಡೆಗಳ ಹೊರತಾಗಿಯೂ ಪ್ರಸ್ತುತ ಸರ್ಕಾರವು ತನ್ನ ಗುರಿಯನ್ನು ಪೂರ್ಣಗೊಳಿಸಿದೆ” ಅಲ್-ವತನ್ ವಾಯ್ಸ್ ನೊಂದಿಗೆ ಅವರು ತಿಳಿಸಿರುವುದಾಗಿ ವರದಿಯಾಗಿದೆ.