ಅಮೇರಿಕ: 50,000 ಡಾಲರ್ ಬಡ್ಡಿ ರಹಿತ ಸಾಲವನ್ನು ನೀಡುವ ಮುಸ್ಲಿಮರು

0
789

ವಾಷಿಂಗ್ಟನ್: ಸರ್ಕಾರದ ಸ್ಥಗಿತದಿಂದ ತೊಂದರೆಗೊಳಗಾದ ಅಮೆರಿಕಾದ ವಿಸ್ಕಾನ್ಸಿಯ ಸರಕಾರಿ ಉದ್ಯೋಗಿಗಳಿಗೆ ಸ್ಥಳೀಯ ಮುಸ್ಲಿಂ ಸಮುದಾಯವು ಬಡ್ಡಿ ರಹಿತ ಸಾಲಗಳನ್ನು ನೀಡುತ್ತಿದೆ.

ಮಸೂದ್ ಅಖ್ತರ್, ವಿ ಆರ್ ಮೆನಿ -ಯುನೈಟೆಡ್ ಎಗೈನ್ಸ್ಟ್ ಹೇಟ್ (ನಾವು ಅನೇಕರು -ದ್ವೇಷದ ವಿರುದ್ಧ ಒಗ್ಗೊಡಿದ್ದೇವೆ)ನ ಅಧ್ಯಕ್ಷ ಮತ್ತು ಸಂಸ್ಥಾಪಕ ಮಸೂದ್ ಅಖ್ತರ್ ಹೇಳುತ್ತಾರೆ, ಮುಸ್ಲಿಂ ಸಮುದಾಯವು ಅವರ ನೋವನ್ನು ತಿಳಿದಿದೆ ಮತ್ತು ಈ ಉದ್ಯೋಗಿಗಳು ತಮ್ಮ ಪಾವತಿಗಳನ್ನೂ ಕಟ್ಟಲು ಹೆಣಗಾಡುತ್ತಿದ್ದು $ 50,000 ಸಾಲವನ್ನು ನಾವು ನೀಡುತ್ತಿದ್ದೇವೆ ಎಂದರು.

“ಎಲ್ಲಾ ವಿಸ್ಕೊಸಿಟೈಟರು ಒಂದೇ ದೇಹವನ್ನು ಹೊಂದಿದ್ದಾರೆ,” ಎಂದು ಅಖ್ತರ್ ಅವರು ಹೇಳಿದರು, ನೋವು ದೇಹದ ಒಂದು ಭಾಗಕ್ಕಾದರೂ ದೇಹದ ಉಳಿದ ಭಾಗವು ನೋವನ್ನು ಅನುಭವಿಸುತ್ತದೆ. ನಮ್ಮ ಫೆಡರಲ್ ಉದ್ಯೋಗಿಗಳ ನೋವನ್ನು ನಾವು ಅನುಭವಿಸುತ್ತಿದ್ದೇವೆ ಮತ್ತು ಸಾಧ್ಯವಾದಷ್ಟು ಅವರಿಗೆ ಸಹಾಯ ಮಾಡಲು ನಾವು ಬಯಸುತ್ತೇವೆ ಮತ್ತು ಅದಕ್ಕಾಗಿ ನಾವು ಪ್ರಯತ್ನಿಸುತ್ತೇವೆ ಎಂದರು.

ತಮ್ಮ ನಂಬಿಕೆ, ಜನಾಂಗೀಯತೆ ಅಥವಾ ವರ್ಣ ಭೇದ ರಹಿತವಾಗಿ ಈ ಬಡ್ಡಿ-ಮುಕ್ತ ಸಾಲಗಳನ್ನು ಎಲ್ಲಾ ಕಾರ್ಮಿಕರಿಗೆ ನೀಡಲಾಗುತ್ತದೆ. ಫೆಡರಲ್ ಉದ್ಯೋಗಿಯಾಗಿರುವ ಯಾರಾದರೂ ಇದಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು.

ಕೆಂಟಕಿಯ ಮತ್ತು ದಕ್ಷಿಣ ಕೆರೊಲಿನಾದ ಮುಸ್ಲಿಮರು ಪರಿಹಾರ ವಸ್ತುಗಳೊಂದಿಗೆ ಕಾಣಿಸಿಕೊಂಡರು: ವಾರದ ವರೆಗೆ ಸಂಬಳ ಪಡೆಯದ ಟಿಎಸ್ಎ ಏಜೆಂಟ್ಗಳಿಗೆ ಉಚಿತ ಆಹಾರ ಮತ್ತು ಬೇಗನೆ ಕೆಟ್ಟು ಹೋಗದ ಆಹಾರಗಳನ್ನು ಒದಗಿಸಿದರು.

ಅಲ್ಲದೆ, ಟೆಕ್ಸಾಸ್ ನ ಸಿಖ್ ಸಮುದಾಯವು ಸಾವಿರಾರು ಅಮೇರಿಕನ್ ಸರ್ಕಾರಿ ಉದ್ಯೋಗಿಗಳಿಗೆ ಉಚಿತ ಊಟವನ್ನು ನೀಡಿದೆ.

ಅಮೆರಿಕಾದ ಕಾಂಗ್ರೆಸ್ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಬಿಕ್ಕಟ್ಟಿನಿಂದಾಗಿ ಸುಮಾರು 800,000 ಫೆಡರಲ್ ಕಾರ್ಮಿಕರಿಗೆ ಡಿಸೆಂಬರ್ 22,ರಿಂದ ವೇತನ ದೊರೆತಿಲ್ಲ, ಅಮೇರಿಕಾದ ದಕ್ಷಿಣದಲ್ಲಿ ಮೆಕ್ಸಿಕೋದೊಂದಿಗಿನ ಗಡಿಯ ತಡೆ ಗೋಡೆಗೆ ಹೆಚ್ಚುವರಿ ಹಣ ಹೂಡಿಕೆ ಮಾಡಿರುವುದು ಸಂಬಳ ಸ್ಥಗಿತಗೊಳಿಸುವಿಕೆಗೆ ಕಾರಣವಾಗಿದೆ.