ಅಫ್ಘಾನಿಸ್ತಾನ: ಮತ್ತಷ್ಟು ಸ್ಥಳಗಳು ತಾಲಿಬಾನ್ ಪಾಲು!

0
3760

ಸನ್ಮಾರ್ಗ ವಾರ್ತೆ

ಕಾಬೂಲ್: ಅಮೆರಿಕದ ಸೈನಿಕರ ಬೆಂಬಲ ಇಲ್ಲದ್ದರಿಂದ ಸೊರಿಗಿರುವ ಅಫ್ಘಾನಿಸ್ತಾನದ ಸೇನೆ ತಾಲಿಬಾನ್ ವಿರುದ್ಧ ಯುದ್ಧದಲ್ಲಿ ತತ್ತರಿಸುತ್ತಿದೆ. ಶುಕ್ರವಾರ ನಿಂರೋಸ್ ರಾಜಧಾನಿ ಸರಂಜ್, ಜೌಸ್‍ಜಾನ್ ಶೇಬರ್‌ಗಾನ್ ನಗರಗಳನ್ನು ತಾಲಿಬಾನ್ ವಶಕ್ಕೆ ಪಡೆದುಕೊಂಡಿದೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ತಾಲಿಬಾನ್ ಕುಂದುಸ್‍ನಲ್ಲಿಯು ಮುನ್ನಡೆ ಗಳಿಸಿರುವುದಾಗಿ ವರದಿ ಮಾಡಿವೆ.

ನಗರಗಳು ತಾಲಿಬಾನ್ ವಶವಾದರೆ ಅಧಿಕೃತ ಅಫ್ಘಾನಿಸ್ತಾನದ ಸೇನೆ ಬಲಹೀನಗೊಳ್ಳುತ್ತದೆ. ಆದ್ದರಿಂದ ಪ್ರಧಾನ ನಾಲ್ಕು ಪಥಗಳು ತಾಲಿಬಾನ್‍ಗಳ ವಶವಾಗಿದೆ ಎಂದು ಹೇಳಲಾಗುತ್ತಿದೆ.

ತಾಲಿಬಾನ್ ಮೇಲೆ ಬಾಂಬ್ ಹಾಕಲಾಗುತ್ತಿದೆ ಎಂದು ಅಫ್ಘಾನಿಸ್ತಾನದ ಸೈನಿಕ ಮೂಲಗಳು ಹೇಳಿದ್ದರೂ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬ ಶಂಕೆ ಉದ್ಭವಿಸಿದೆ. ಕುಂದುಸ್ ನಂತರ ಇತರ ಪ್ರಾಂತ್ಯಗಳಲ್ಲಿ ತಾಲಿಬಾನ್ ಹಿಡಿತ ಬಿಗಿಗೊಳಿಸುತ್ತಿದೆ. ಈ ಮಧ್ಯೆ ಕಾಬೂಲಿನಲ್ಲಿ ವಾಯುಸೇನೆಯ ಪೈಲಟ್‍ ಒಬ್ಬರನ್ನು ಬಾಂಬು ಹಾಕಿ ಹತ್ಯೆ ಮಾಡಿದೆ. ಅಮೆರಿಕ ಸೇನೆಯಿಂದ ತರಬೇತಿ ಪಡೆದ ವೈಮಾನಿಕರನ್ನು ಇಲ್ಲದಾಗಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೈಲಟ್ ಹತ್ಯೆಯನ್ನು ತಾಲಿಬಾನ್ ದೃಢೀಕರಿಸಿದೆ. ಈ ಪೈಲಟ್ ಅಮೆರಿದ ಬ್ಲಾಹಾಕ್ ಹೆಲಿಕಾಪ್ಟರ್ ಹಾರಾಟ ನಡೆಸುವಲ್ಲಿ ಪರಿಣಿತನಾಗಿದ್ದರು. ಜೀವ ಬೆದರಿಕೆ ಇದ್ದುದರಿಂದ ಅವರು ಕಳೆದ ಒಂದು ವರ್ಷದ ಹಿಂದೆ ಕಾಬೂಲ್‍ಗೆ ಬಂದಿದ್ದರು.

ತಾಲಿಬಾನ್‍ಗೆ ಹೆದರಿ ಬಹಳಷ್ಟು ಸೈನಿಕರು ಹಿಂದೆ ಸರಿಯುತ್ತಿರುವುದು ಅಫ್ಘಾನ್ ಸರಕಾರಕ್ಕೆ ಹಿನ್ನಡೆಯಾಗಿದೆ. ಒಂದು ಕಡೆ ತಾಲಿಬಾನ್ ಪ್ರಾಂತ್ಯಗಳ ಮೇಲೆ ಮುನ್ನಡೆ ಸಾಧಿಸುತ್ತಿದೆ. ಇನ್ನೊಂದೆಡೆ ಸಾರ್ವಜನಿಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಇದು ಅಧಿಕೃತ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ.