ಕೇಂದ್ರ ಸರಕಾರಕ್ಕೆ ಭಯಪಡುವ ಅಥವಾ ಅದರ ವಿರುದ್ಧ ಹೋರಾಡುವ ಸಮಯವಾಯಿತು: ಉದ್ಧವ್ ಠಾಕ್ರೆ

0
663

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.26: ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರಕ್ಕೆ ಹೆದರವುದಕ್ಕೋ ಅವರ ವಿರುದ್ಧ ಹೋರಾಡುವುದಕ್ಕೋ ತೀರ್ಮಾನ ಕೈಗೊಳ್ಳುವ ಸಮಯವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿಯವರು ನಡೆಸಿದ ಪ್ರತಿಪಕ್ಷ ಪಾರ್ಟಿಗಳ ಸಭೆಯಲ್ಲಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ನೀಟ್, ಜೆಇಇ ಪರೀಕ್ಷೆಗಳು ನಡೆಸುವ ಕೇಂದ್ರ ಸರಕಾರದ ತೀಮಾನದ ಬಳಿಕ ಪ್ರತಿಪಕ್ಷ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿತ್ತು.

ಮಹಾರಾಷ್ಟ್ರ ಲಾಕ್‍ಡೌನ್‍ನಿಂದ ಹಂತಹಂತವಾಗಿ ಹೊರಬರುತ್ತಿದೆ. ಶಾಲೆಗಳು ಈಗಲೂ ಮುಚ್ಚಿಕೊಂಡೇ ಇವೆ ಎಂದು ಠಾಕ್ರೆ ಹೇಳಿದರು.

ಫೆಡರಿಲಿಸಂನನ್ನು ನಾಶಪಡಿಸಿ ಕೇಂದ್ರ ಸರಕಾರ ಮುಂದೆ ಸಾಗುತ್ತಿದೆ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ಪರೀಕ್ಷೆಗಳನ್ನು ಮುಂದೂಡುವುದಕ್ಕೆ ಸಂಬಂಧಿಸಿದ ವಿಷಯದಲ್ಲಿ ಸುಪ್ರೀಂಕೋರ್ಟಿನ ಮೊರೆಹೋಗಬೇಕು. ಕೇಂದ್ರ ಸರಕಾರದ ತೀರ್ಮಾನ ವಿದ್ಯಾರ್ಥಿಗಳನ್ನು ಮಾನಸಿಕ ಒತ್ತಡಕ್ಕೆ ದೂಡುವುದಾಗಿದೆ. ಇಂತಹದೊಂದು ಅರಾಜಕತೆಯನ್ನು ಪ್ರಜಾಪ್ರಭುತ್ವದಲ್ಲಿ ಈ ಮೊದಲು ನೋಡಿಲ್ಲ. ಪರಿಸ್ಥಿತಿ ಗಂಭೀರವಾಗಿದೆ. ಮಕ್ಕಳಿಗೆ ಬೇಕಾಗಿ ನಾವು ಮಾತಾಡಬೇಕಾಗಿದೆ ಎಂದುಮಮತಾ ಹೇಳಿದರು. ಪರೀಕ್ಷೆಗಳಿಗೆ ಸೂಕ್ತ ಸಮಯ ಇದಲ್ಲ ಎಂದು ಝಾರ್ಕಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಹೇಳಿದರು.

ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸುವ ಮೊದಲು ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಿ, ರಾಷ್ಟ್ರಪತಿಗೆ ದೂರು ನೀಡಬೇಕೆಂದು ಅವರು ಹೇಳಿದರು.

ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಅಮರೀಂದರ್ ಸಿಂಗ್, ಭೂಪೇಶ್ ಬಗೆಲ್, ಅಶೋಕ್ ಗೆಹ್ಲೋಟ್, ವಿ.ನಾರಾಯಣ ಸ್ವಾಮಿಯವರೂ ಸೋನಿಯಾ ಗಾಂಧಿ ಕರೆದ ಸಭೆಯಲ್ಲಿ ಭಾಗವಹಿಸಿದ್ದಾರೆ. ಸೆಪ್ಟಂಬರ್‌ನಲ್ಲಿ ನೀಟ್, ಜೆಇಇ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಇದರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.