ಹಿಂದೂ ರಕ್ಷಾ ದಳದಿಂದ ಸಾರ್ವಜನಿಕವಾಗಿ ತಲವಾರು ವಿತರಣೆ: ಎಫ್ಐಆರ್ ದಾಖಲು

0
862

ಸನ್ಮಾರ್ಗ ವಾರ್ತೆ

ತಲವಾರುಗಳನ್ನು ವಿತರಿಸಿದ ಮತ್ತು ಮುಸ್ಲಿಂ ವಿರೋಧಿ ಘೋಷಣೆಯನ್ನು ಕೂಗಿದ ಹಿಂದೂ ರಕ್ಷಾ ದಳದ ಹತ್ತು ಮಂದಿ ಸದಸ್ಯರನ್ನು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬಂಧಿಸಲಾಗಿದೆ. ಈಗಾಗಲೇ ಗುರುತು ಪತ್ತೆಹಚ್ಚಲಾದ 16 ಮಂದಿಯ ಮೇಲೆ ಎಫ್ಐಆರ್ ದಾಖಲಾಗಿದ್ದು ಅಪರಿಚಿತರಾದ 25 ರಿಂದ 30 ಮಂದಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂ ರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಚೌದರಿಯ ಹೆಸರು ಎಫ್ಐಆರ್‌ನಲ್ಲಿದ್ದು ಆತ ತಲೆಮರೆಸಿಕೊಂಡಿದ್ದಾನೆ.

ಹಿಂದುಗಳೇ ತಲವಾರನ್ನು ಕೈಗೆತ್ತಿಕೊಳ್ಳಿ ಎಂದು ಬಾಂಗ್ಲಾದೇಶದ ಪರಿಸ್ಥಿತಿಯನ್ನು ತೋರಿಸಿ ಆತ ಹಿಂದುಗಳಿಗೆ ಕರೆ ನೀಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಪ್ರತಿ ಜಿಹಾದಿಗಳಿಗೂ ಅವರದೇ ರೀತಿಯಲ್ಲಿ ಉತ್ತರವನ್ನು ಕೊಡುತ್ತೇವೆ ಎಂದು ಕೂಡ ಆತ ಹೇಳಿದ್ದಾನೆ.

ಈತ ಉತ್ತರ ಪ್ರದೇಶದ ನಿರ್ದಿಷ್ಟ ಪ್ರದೇಶದಲ್ಲಿ ಮಾರ್ಚ್ ನಡೆಸಿದ್ದಾನೆ ಮತ್ತು ಮುಸ್ಲಿಂ ದ್ವೇಷದ ಘೋಷಣೆಯನ್ನು ಕೂಗಿದ್ದಾನೆ ಎಫ್ಐಆರ್ ನಲ್ಲಿ ದಾಖಲಾಗಿದೆ.