ತೆಲಂಗಾಣ: ಹೈಡ್ರೋ ಎಲೆಕ್ಟ್ರಿಕ್ ಪ್ಲಾಂಟಿನಲ್ಲಿ ಬೆಂಕಿ; ಒಳಗೆ ಬಾಕಿಯಾಗಿರುವ 9 ಮಂದಿ ರಕ್ಷಣೆಗೆ ಕಾರ್ಯಾಚರಣೆ ಜಾರಿ

0
347

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.21: ಗುರುವಾರ ತಡರಾತ್ರೆ ತೆಲಂಗಾಣದ ಹೈಡ್ರೊ ಎಲೆಕ್ಟ್ರಿಕ್‌ ಪ್ಲಾಂಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಫ್ಲಾಂಟಿನೊಳಗೆ 9 ಮಂದಿ ಸಿಕಿಬಿದ್ದಿದ್ದಾರೆ ಎಂದು ವರದಿಯಾಗಿದ್ದು ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದೆ.

ಆಂಧ್ರಪ್ರದೇಶದ ಗಡಿಭಾಗದ ಶ್ರೀಶೈಲಂ ಹೈಡ್ರೊ ಇಲೆಕ್ಟ್ರಿಕ್ ಫ್ಲಾಂಟಿನಲ್ಲಿ ರಾತ್ರೆ 10:30ಕ್ಕೆ ಬೆಂಕಿ ಕಾಣಿಸಿಕೊಂಡಿತ್ತು. ಹತ್ತು ಮಂದಿಯನ್ನು ಈವರೆಗೆ ರಕ್ಷಿಸಲಾಗಿದೆ.

ಶ್ರೀಶೈಲಂ ಅಣೆಕಟ್ಟಿನ ತೀರದಲ್ಲಿರುವ ಹೈಡ್ರೊ ಎಲೆಕ್ಟ್ರಿಕ್ ಫ್ಲಾಂಟ್‍ನ ಪವರ್ ಹೌಸ್‍ನಲ್ಲಿ ಬೆಂಕಿ ಅನಾಹುತವಾಗಿದೆ. ಶಾರ್ಟ್ ಸಕ್ರ್ಯೂಟ್ ಅವಘಡಕ್ಕೆ ಕಾರಣವೆಂದು ಪ್ರಾಥಮಿಕ ವಿವರ ಲಭ್ಯವಾಗಿದ್ದು, ಅವಘಡ ನಡೆಯುವ ಸಮಯದಲ್ಲಿ ಪವರ್ ಪ್ಲಾಂಟಿನಲ್ಲಿ 25 ಮಂದಿ ಕೆಲಸ ಮಾಡುತ್ತಿದ್ದರು.

ದುರಂತ ನಿವಾರಣಾ ಸೇನೆ ಸ್ಥಳಕ್ಕಾಗಮಿಸಿ ಪ್ಲಾಂಟಿನೊಳಗಿರುವವರನ್ನು ರಕ್ಷಿಸಲು ಶ್ರಮಿಸುತ್ತಿದೆ. ಕರ್ನೂಲ್‌ನ ಅಗ್ನಿಶಾಮಕ ಸಿಬ್ಬಂದಿ ಅಲ್ಲಿಗೆ ಬಂದು ನೆರವಾಗುತ್ತಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣವನ್ನು ಪ್ರತ್ಯೇಕಿಸುವ ಕೃಷ್ಣ ನದಿ ಅಣೆಕಟ್ಟಿನಲ್ಲಿ ಆರು ಪವರ್ ಜನರೇಟರುಗಳು ಇವೆ. ನಾಲ್ಕನೆ ಜನರೇಟರಿನಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.,

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.