ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳ ಖರೀದಿಗೆ ಸರ್ಕಾರ ಮುಂದಾಗಲಿ: ಜೀಲಾನಿ ಪಾಷಾ

0
63

ಸನ್ಮಾರ್ಗ ವಾರ್ತೆ

ರಾಯಚೂರು: ಪ್ರತಿ ವರ್ಷ ನವಂಬರ್ ನಲ್ಲಿ ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿ ಪ್ರತಿಕ್ರಿಯೆ ಪ್ರಾರಂಭ ವಾಗುತ್ತಿತ್ತು‌. ಈ ವರ್ಷ ನವೆಂಬರ್ ತಿಂಗಳು ಮುಗಿದು ಡಿಸೆಂಬರ್ ತಿಂಗಳು ಬಂದರೂ ಖರೀದಿ ಪ್ರತಿಕ್ರಿಯೆ ಪ್ರರಂಭವಾಗದಿರುವುದು ರೈತರಲ್ಲಿ ಆತಂಕ ಹುಟ್ಟಿಸಿದೆ ಎಂದು ಫೆಡೆರೇಷನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ(FITU) ರಾಜ್ಯ ಸಮಿತಿ ಸದಸ್ಯ ಜೀಲಾನಿ ಪಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತರ ಆದಾಯ ದ್ವಿಗುಣ ಗೊಳಿಸುದಾಗಿ ಹೇಳುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬೆಂಬಲ ಬೆಲೆ ಕೃಷಿ ಉತ್ಪನ್ನಗಳು ಖರೀದಿಸಲು ಇನ್ನು ಮುಂದೆ ಬಂದಿಲ್ಲ. ಲಕ್ಷಾಂತರ ರೈತರು ತಮ್ಮ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಮಾರುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಸರ್ಕಾರ ರೈತರ ನಿರೀಕ್ಷೆಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.

ಲಕ್ಷಾಂತರ ರೂಪಾಯಿ ಹೊಡಿಕೆ ಮಾಡಿ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿರೀಕ್ಷೆಯಲ್ಲಿದ್ದಾರೆ. ಕೊಡಲೇ ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳನ್ನು ವಿಶೇಷವಾಗಿ ಹತ್ತಿ ಮತ್ತು ಕವಳೆ(ಭತ್ತ) ಖರೀದಿ ಪ್ರತಿಕ್ರಿಯೆಯನ್ನು ಪ್ರಾರಂಭಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.