ಮತ್ತೆ ಕುವೈಟ್ ಗೆ ವಿಮಾನ ಸೇವೆ ಆರಂಭ : ಒಂದು ವಾರದಲ್ಲಿ ತಲುಪಿದ ಭಾರತೀಯರ ಸಂಖ್ಯೆ 7582

0
395

ಸನ್ಮಾರ್ಗ ವಾರ್ತೆ

ಕುವೈಟ್ : ಭಾರತದಿಂದ ಕುವೈಟ್ ಗೆ ವಿಮಾನ ಪ್ರಯಾಣ ಪ್ರಾರಂಭವಾಗಿ ಒಂದು ವಾರ ಕಳೆದಿದ್ದು, ಈಗಾಗಲೇ 7582 ಮಂದಿ ಕುವೈಟ್ ತಲುಪಿದ್ದಾರೆ ಎಂದು ವರದಿಯಾಗಿದೆ.

ಕಳೆದ ಒಂದು ವಾರದಲ್ಲಿ 86 ವಿಮಾನಗಳು ಭಾರತದಿಂದ ಕುವೈತ್ ಗೆ ತಲುಪಿದ್ದು, 7582 ಮಂದಿ ಕುವೈಟ್ ಗೆ ಪ್ರಯಾಣಿಸಿದ್ದಾರೆ. ಈಜಿಪ್ಟ್ ನಿಂದ ಅತ್ಯಧಿಕ ಅಂದರೆ 10 ಸಾವಿರಕ್ಕಿಂತಲೂ ಮೇಲ್ಪಟ್ಟು ಮಂದಿ ಕುವೈಟ್ ಗೆ ಆಗಮಿಸಿರುವುದಾಗಿ ತಿಳಿದು ಬಂದಿದೆ. ಸೆಪ್ಟೆಂಬರ್ 5 ರಿಂದ 11 ರ ವರೆಗಿನ ಲೆಕ್ಕ ಇದಾಗಿದೆ.

ಭಾರತದಿಂದ ಪ್ರತಿದಿನ 768 ಮಂದಿಗೆ ಕುವೈಟ್ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ಕಾಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಮಿತಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಅನಿವಾಸಿ ಭಾರತೀಯರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here