56 ವರ್ಷದ ಹಿಂದೆ ಕೈಬಿಟ್ಟ ರೈಲು ಮಾರ್ಗ ಪುನರಾರಂಭ: ಭಾರತದಿಂದ ಬಾಂಗ್ಲಾದೇಶಕ್ಕೆ ಪ್ಯಾಸೆಂಜರ್ ರೈಲು

0
814

ಸನ್ಮಾರ್ಗ ವಾರ್ತೆ

ಕೊಲ್ಕತಾ: ಬಹಳ ಹಿಂದೆ ಅಂದರೆ 56 ವರ್ಷಗಳ ಹಿಂದೆ ಸಕ್ರಿಯವಾಗಿದ್ದ ರೈಲು ಹಳಿಯನ್ನು ಪುನರಾರಂಭಿಸಲು ಭಾರತ ಮತ್ತು ಬಾಂಗ್ಲಾ ಸರಕಾರಗಳು ನಿರ್ಧರಿಸಿವೆ. ಗಡಿಯಲ್ಲಿ ಹಾದು ಹೋಗುವ ಹಲ್‍ದಿಬಾರಿ-ಚಿಲಹಟ್ಟಿ ರೈಲು ಮಾರ್ಗದಲ್ಲಿ ಪ್ಯಾಸಂಜೆರ್ ರೈಲು ಪುನಃ ಓಡಾಟ ಭಾರತ ಮತ್ತು ಬಾಂಗ್ಲಾ ದೇಶದ ನಡುವೆ ರೈಲು ಸಂಚಾರ ಆರಂಭಿಸುವ ಯೋಜನೆಯ ಅಂಗವಾಗಿ ನಡೆಯಲಿದೆ.

ಭಾರತ, ಬಾಂಗ್ಲಾ ಅಂತಾರಾಷ್ಟ್ರೀಯ ಗಡಿ 4.5 ಕಿಲೊ ಮೀಟರ್ ದೂರದಲ್ಲಿ ಕೂಚ್‍ಬಿಹಾರದ ಹಲ್‍ದಿಬಾರಿ ಇದೆ. ಇದನ್ನು ಝಿರೊ ಪಾಯಿಂಟ್ ಎನ್ನಲಾಗುತ್ತದೆ. ಬಾಂಗ್ಲಾದೇಶದ ನಿಲ್‍ಪಮಾರಿ ಜಿಲ್ಲೆಯ ಚಿಲಹಟ್ಟಿಯಿಂದ 12 ಕಿಲೊಮೀಟರ್ ದೂರದಲ್ಲಿ ರಂಗ್‍ಪುರ ವಿಭಾಗದಲ್ಲಿ ಹಲ್‍ದಿಬಾರಿ ಇದೆ.

ಕೊಲ್ಕತಾದ ಬಾಂಗ್ಲಾದೇಶ ಡೆಪ್ಯುಟಿ ಹೈಕಮಿಶನರ್ ತೌಫೀಖ್ ಹುಸೈನ್, ಹೈಕಮಿಶನರ್ ಬಿಸಿನೆಸ್ ಪ್ರಮುಖ್ ಎಂಡಿ ಶಂಸುಲ್ ಆರಿಫ್ ಸಿಲಿಗಿರಿ ಸೋನಾಲಿ ಬ್ಯಾಂಕ್ ಮ್ಯಾನೇಜರ್ ಜಬೀದುಲ್ ಆಲಂ ಹಲ್ದ್‍ಬಾರಿ ರೈಲು ನಿಲ್ದಾಣ ಮತ್ತು ರೈಲು ಹಳಿಯನ್ನು ನೋಡಿ ಬಂದಿದ್ದಾರೆ. ಚಿಲಹಟ್ಟಿ, ಹಲ್ದಿಬಾರಿ ನಡುವೆ ರೈಲು ಸಂಚಾರ ಆರಂಭಿಸುವುದರಲ್ಲಿ ಸಂತೋಷ ಇದೆ ಎಂದು ತೌಫಿಕ್ ಹುಸೈನ್ ಹೇಳಿದರು.