ಭದ್ರತಾ ತಪಾಸಣೆ ವೇಳೆ ಶರ್ಟ್ ಬಿಚ್ಚುವಂತೆ ಒತ್ತಾಯ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಾದ ಕಹಿ ಅನುಭವ ಹಂಚಿಕೊಂಡ ಸಂಗೀತಗಾರ್ತಿ

0
177

ಸನ್ಮಾರ್ಗ ವಾರ್ತೆ

ಬೆಂಗಳೂರು: ಭದ್ರತಾ ತಪಾಸಣೆ ನೆಪದಲ್ಲಿ ಯುವತಿಯೊಬ್ಬಳಿಗೆ ಶರ್ಟ್ ತೆಗೆಯುವಂತೆ ಹೇಳಿದ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಟ್ವಿಟರ್‌ನಲ್ಲಿ ತಮ್ಮ ಸಂಕಷ್ಟವನ್ನು ವಿವರಿಸಿರುವ ವಿದ್ಯಾರ್ಥಿ ಹಾಗೂ ಸಂಗೀತಗಾರ್ತಿ ಕ್ರಿಶಾನಿ ಗಧ್ವಿ “ಇದೊಂದು ಅವಮಾನಕರ ಅನುಭವವಾಗಿತ್ತು” ಎಂದು ಹೇಳಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ತಮ್ಮ ಸಂಕಷ್ಟವನ್ನು ವಿವರಿಸಿರುವ ವಿದ್ಯಾರ್ಥಿ ಹಾಗೂ ಸಂಗೀತಗಾರ್ತಿ ಕ್ರಿಶಾನಿ ಗಧ್ವಿ “ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ನನ್ನ ಶರ್ಟ್ ತೆಗೆಯುವಂತೆ ಕೇಳಲಾಗಿತ್ತು. ಇದು ನಿಜವಾಗಿಯೂ ಅವಮಾನಕರವಾಗಿತ್ತು. ಬೆಂಗಳೂರು ಏರ್ ಪೋರ್ಟ್‌ಗೆ ಬಟ್ಟೆ ತೆಗೆಯಲು ಮಹಿಳೆಯರೇ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ.

ಈ ಟ್ವೀಟ್ ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಹಲವಾರು ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದೆ ಈ ವಿಚಾರವನ್ನು ಭದ್ರತಾ ತಂಡದ ಗಮನಕ್ಕೆ ತರಲಾಗಿದೆ ಎಂದು ಭರವಸೆ ನೀಡಿದ ವಿಮಾನ ನಿಲ್ದಾಣವು ಘಟನೆಗೆ ವಿಷಾದ ವ್ಯಕ್ತಪಡಿಸಿದೆ.

“ಹಲೋ ಕ್ರಿಶಾನಿ ಗಧ್ವಿ, ನಿಮಗೆ ಆಗಿರುವ ಕಹಿ ಅನುಭವಕ್ಕೆ ನಾವು ತೀವ್ರವಾಗಿ ವಿಷಾದಿಸುತ್ತೇವೆ ಹಾಗೂ ಇದು ಸಂಭವಿಸಬಾರದಿತ್ತು. ನಾವು ಇದನ್ನು ನಮ್ಮ ಕಾರ್ಯಾಚರಣೆ ತಂಡದ ಗಮನಕ್ಕೆ ತಂದಿದ್ದೇವೆ. ಸಿಐಎಫ್ ಭದ್ರತಾ ತಂಡದ ಗಮನಕ್ಕೂ ತಂದಿದ್ದೇವೆ” ಎಂದು ಬೆಂಗಳೂರು ಏರ್ ಪೋರ್ಟ್ ಟ್ವೀಟಿಸಿದೆ.