ಪ್ರತಾಪ್ ಸಿಂಹ ಕೊಡಗು ಸಂಸದರಾದ ಮೇಲೆ ಕೊಡಗು ಹಾಳಾಗಿದೆ ಎಂದು ಮಾಜಿ ಎಂಎಲ್ ಸಿ ವೀಣಾ ಅಚ್ಚಯ್ಯ ವಾಗ್ದಾಳಿ.!!

0
97

ಸನ್ಮಾರ್ಗ ವಾರ್ತೆ

ಕೊಡಗು ಮೈಸೂರು ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಕೊಡಗಿಗೆ ಬಂದ ಮೇಲೆ ಕೊಡಗು ಹಾಳಾಗಿದೆ‌ ಎಂದು ಕಾಂಗ್ರೆಸ್ ಮಾಜಿ ಎಂಎಲ್ ಸಿ ವೀಣಾ ಅಚ್ಚಯ್ಯ ಅಕ್ರೋಶ ಹೋರ ಹಾಕಿದ್ದಾರೆ.

ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಕೊಡಗಿಗೆ ಸಂಸದರಾಗಿ ಪ್ರತಾಪ್ ಸಿಂಹ ಬಂದ್ರು 2018 ರಲ್ಲಿ ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲಿ ಕೇವಲ ಬಿದ್ದ ಮರಗಳ ಮುಂದೆ ನಾಟಕೀಯವಾಗಿ ಪೋಟೋ ಶೋಟ್ ಗೆ ಸೀಮಿತವಾದ್ರೇ ಹೊರತು ಪ್ರಧಾನಿ ಮೋದಿ ಅವರೊಂದಿಗೆ ಮಾತಾನಾಡಿ ಕೇಂದ್ರದಿಂದ ವಿಶೇಷ ಯೋಜನೆ ಅಡಿಯಲ್ಲಿ ಒಂದು ನಯಾ ಪೈಸೆ ತರಲು ಸಾಧ್ಯವಾಗಲ್ಲಿಲ್ಲ. ಪ್ರಧಾನಿ ಮೋಧಿ ಅವರು ಆತ್ಮಿಯರು ಎಂದು ಬಿಂಬಿಸಿಕೊಳ್ಳುವುದರಲ್ಲೇ ಹತ್ತು ವರ್ಷ ಕಳೆದರು.

ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಶಾಸಕರೊಂದಿಗೆ ಕೊಡಗಿನ‌ ಜನರೊಂದಿಗೆ ಮತ ಕೇಳಲು ಅವರು ಹೋಗಿಲ್ಲ‌. ಇದೀಗ ಮಾಜಿ ಶಾಸಕರು ಮನೆಯಲ್ಲಿ ಇರುವ ಸಂದರ್ಭದಲ್ಲಿ ಕೊಡಗಿಗೆ ಅಗೊಮ್ಮೆ ಈಗೊಮ್ಮೆ ನಾಟಕ ಮಾಡಿಕೊಂಡು ಬಂದು ಹೋಗತ್ತ ಇದ್ದಾರೆ. ಪ್ರತಾಪ್ ಸಿಂಹ ಅವರಿಗೂ ಬಿಜೆಪಿ ಶಾಸಕರು ಸೋಲುವುದನ್ನು ಕಾಯುತ್ತಿದ್ದರು ಎಂದು ಮುನ್ನೋಟಕ್ಕೆ ಕಂಡು ಬರುತ್ತದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಬಲ ನೀಡಲಿದೆ. ಅದು ಬಡವರಿಗೆ ಕೊಟ್ಟ ಯೋಜನೆ ಅದರ ಫಲಾನುಬಾವಿಗಳಿಗೆ ಒಂದು ಹೊತ್ತು ಊಟ ಮಾಡಲು, ಆರ್ಥಿಕವಾಗಿ ಸದೃಢರಾಗುವಂತೆ ಅವರ ಖಾತೆಯಲ್ಲಿ ಎರಡು ಸಾವಿರ ಹಣ ಬರುತ್ತಿದೆ. ಅದರ ಋಣವನ್ನು ತೀರಿಸಲು ಮಹಿಳೆಯರು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಕೈ ಹಿಡಿಯುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ವೀಣಾ ಅಚ್ಚಯ್ಯ ತಿಳಿಸಿದ್ದಾರೆ.

ಬೈಟ್:-ವೀಣಾ ಅಚ್ಚಯ್ಯ ಮಾಜಿ ಎಂಎಲ್ ಸಿ