ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯನ್ನು ಅವಮಾನಿಸಿ ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಹತ್ತು ಎಫ್‍ಐಆರ್ ಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಪೂರ್ವ ದಿಲ್ಲಿಯ ಕಲ್ಯಾಣ್ ಪುರಿಯ ದಲೀಪ್ ಲಾಲ್, ಶಿವಂ ದುಬೆ, ರಾಹುಲ್ ತ್ಯಾಗಿ, ರಾಜೀವ್ ಕುಮಾರ್ ಬಂಧಿತರು. ನಾಲ್ವರು ಆಮ್ ಆದ್ಮಿ ಕೌನ್ಸಿಲರ್ ಧೀರೇಂದರ್ ಕುಮಾರ್ ಗಾಗಿ ಪೊಸ್ಟರ್ ಅಂಟಿಸಿದ್ದು ಎಂದು ಪೊಲೀಸರು ಹೇಳುತ್ತಿದ್ದಾರೆ. ಕೌನ್ಸಿಲರ್ ಶಾಮೀಲಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಧಾನಿಯವರನ್ನು ಟೀಕಿಸುವ ಅವಹೇಳನ ಮಾಡುವ ಪೋಸ್ಟರ್ ಗಳನ್ನು ದಿಲ್ಲಿಯ ವಿವಿಧ ಕಡೆಗಳಲ್ಲಿ ಅಂಟಿಸಲಾಗಿದೆ ಎಂದು ಹಿರಿಯ ಪೊಲೀಸಧಿಕಾರಿಗಳು ಹೇಳಿದ್ದಾರೆ. ಈ ವಿವರವನ್ನು ಎಲ್ಲ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೂ ನೀಡಲಾಗಿದೆ. ನಂತರ ಹತ್ತು ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ದೂರಿಗೆ ತಕ್ಕಂತೆ ಎಫ್‍ಐರ್‍ಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಅವರು ಹೇಳಿದರು. ಇದೇ ವೇಳೆ ಘಟನೆಯಲ್ಲಿ ತನ್ನ ವಿರುದ್ಧ ಆರೋಪ ಹೊರಿಸುತ್ತಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಕೌನ್ಸಿಲರ್ ಧೀರೇಂದರ್ ಕುಮಾರ್ ಹೇಳಿದರು.












