ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಆಗ್ರಹಿಸಿ ವುಮೆನ್ ಇಂಡಿಯಾ ಮೂವ್ ಮೆಂಟ್ ನಿಂದ ದ.ಕ. ಜಿಲ್ಲಾದ್ಯಂತ ಮನವಿ

0
451

ಸನ್ಮಾರ್ಗ ವಾರ್ತೆ

ದಕ್ಷಿಣ ಕನ್ನಡ ಜೂ – 26: ಕೋವಿಡ್ – 19 ಕೊರೋನ ವೈರಸ್ ಲಾಕ್ ಡೌನ್ ನಿಂದಾಗಿ ಜನ ಸಾಮಾನ್ಯರು ಕೆಲಸವಿಲ್ಲದೇ ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಈ ಸಂಧರ್ಭ ದಲ್ಲಿ ಲಾಕ್ ಡೌನ್ ಸಮಯದ ಎರಡು ತಿಂಗಳ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಬೇಕೆಂದು ಜನ ಸಾಮಾನ್ಯರ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ವುಮೆನ್ ಇಂಡಿಯಾ ಮೂವ್ ಮೆಂಟ್ ಹೇಳಿದೆ.

ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಜನ ಸಾಮಾನ್ಯರೊಂದಿಗೆ ಸರ್ಕಾರ ಕರುಣೆ ತೋರಿ ಲಾಕ್ ಡೌನ್ ಸಂಧರ್ಭದಲ್ಲಿನ ಎರಡು ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕು. ನಮ್ಮ ದೇಶದ ಬೇರೆ ರಾಜ್ಯಗಳಲ್ಲಿ ಬಿಲ್ ಕಡಿಮೆ ಮಾಡಿರುವಂತದ್ದು ಹಾಗೂ ಮನ್ನಾ ಮಾಡಿರುವ ಉದಾಹರಣೆಗಳು ಇರುವಾಗ ನಮ್ಮ ರಾಜ್ಯ ಕೂಡ ಅದೇ ರೀತಿ ಮಾಡಬೇಕೆಂದು ವುಮೆನ್ ಇಂಡಿಯಾ ಮೂವ್ ಮೆಂಟ್ ( WIM ) ವತಿಯಿಂದ ದ.ಕ. ದ ವಿವಿಧ ಕ್ಷೇತ್ರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ರಾಜ್ಯ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಮಂಗಳೂರು ದಕ್ಷಿಣ ವಿಮ್ ಜಿಲ್ಲಾ ಸಮಿತಿ ಸದಸ್ಯರಾದ ಸಂಶಾದ್ ಕುಳಾಯಿ ನೇತ್ರತ್ವದಲ್ಲಿ, ಬಿ.ಸಿ.ರೋಡ್ ಝಹನಾ ಬಂಟ್ವಾಳ ,ಪುತ್ತೂರಿನಲ್ಲಿ ಕೌನ್ಸಿಲರ್ ಝೊಹರಾ, ಮುಲ್ಕಿ ಮೂಡಬಿದ್ರೆ ಯಲ್ಲಿ ಆಯಿಶಾ ಬಜ್ಪೆ, ಬೆಳ್ತಂಗಡಿಯಲ್ಲಿ ಮರಿಯಮ್, ಸುಳ್ಯದಲ್ಲಿ ನಸ್ರಿಯಾ ಬೆಳ್ಳಾರೆ, ಮಂಗಳೂರಿನಲ್ಲಿ ಅಡ್ವೋಕೇಟ್ ರುಬಿಯಾ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.