ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್

0
280

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಡಿ.22: ಮುಂದಿನ ವರ್ಷದ ಗಣರಾಜ್ಯೋತ್ಸವಕ್ಕೆ ಫ್ರಾನ್ಸಿನ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಮುಖ್ಯ ಅತಿಥಿ ಆಗಮಿಸಲಿದ್ದಾರೆ. ಈ ರೀತಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗುವ 5 ನೇ ಫ್ರೆಂಚ್ ಆಡಳಿತಗಾರ ಮ್ಯಾಕ್ರೋನ್ ಆಗಲಿದ್ದು 1976ರಿಂದ ಫ್ರೆಂಚ್ ಅಧ್ಯಕ್ಷರು ರಿಪಬ್ಲಿಕ್ ದಿನದಂದು ಅತಿಥಿಗಳಾಗಿ ಭಾರತಕ್ಕೆ ಬರುವುದು ಆರಂಭವಾಯಿತು.

ರಿಪಬ್ಲಿಕ್ ಡೇ ಗೆ ಮುಖ್ಯ ಅತಿಥಿಯಾಗಿ ಭಾರತ ಸರಕಾರ ಅಮೆರಿಕ ಅಧ್ಯಕ್ಷ ಜೊ ಬೈಡನ್‍ರನ್ನು ಆಹ್ವಾನಿಸಿತ್ತು. ಆದರೆ ಭಾರತಕ್ಕೆ ಬರಲು ಬೈಡನ್‍ರಿಗೆ ಸಾಧ್ಯವಾಗುವುದಿಲ್ಲ ಎಂದು ಬೈಡನ್‍ರ ಕಚೇರಿ ತಿಳಿಸಿದೆ. ಬೈಡನ್ ಈಗ ವಿದೇಶ ಪ್ರವಾಸದತ್ತ ಗಮನಹರಿಸುವಂತಿಲ್ಲ. ಆಂತರಿಕ ವಿಷಯಗಳತ್ತ ಗಮನ ಹರಿಸಿದ್ದಾರೆ. 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದನ್ನು ಎದುರು ನೋಡುತ್ತಿದ್ದಾರೆ.

ನಂತರ ಬ್ರಿಟಿಷ್ ಪ್ರಧಾನಿ ಋಷಿ ಸುನಕ್‍ರಿಗೆ ಆಹ್ವಾನ ನೀಡುವ ಕುರಿತು ಚಿಂತನೆ ನಡೆದಿತ್ತು. ಆದರೆ ಬಳಿಕ ಮ್ಯಾಕ್ರೋನ್‍ರಿಗೆ ಪರಿಗಣನೆ ನೀಡಲು ತೀರ್ಮಾನಿಸಲಾಯಿತು.

ಮ್ಯಾಕ್ರೋನ್ ಭಾಗವಹಿಸುವ ಕುರಿತು ಎರಡು ದೇಶಗಳ ಅಧಿಕೃತ ದೃಢೀಕರಣ ಬಂದಿಲ್ಲ. ಈ ಹಿಂದೆ ಭಾರತದಲ್ಲಿ ಗಣರಾಜ್ಯೋತ್ಸವದಲ್ಲಿ ಇಮ್ಯಾನುವೇಲ್ ಮ್ಯಾಕ್ರಾನ್, ಜಾಕ್ವಾಸ್ ಶಿರಾಕ್, ವಲೇರಿ ಜಿಸ್‍ಕಾರ್‍ಡಿ ಎಸ್ಟಟಿಂಗ್, ನಿಕಾಲಸ್ ಸರ್ಕೋಝಿ, ಫ್ರಾಂಗ್‍ಸ್ವ ಒಲೆಂಡ್ ಭಾಗವಹಿಸಿದ ಫ್ರಾನ್ಸಿನ ಅಧ್ಯಕ್ಷರು ಆಗಿದ್ದಾರೆ.