ಆನ್‌ಲೈನ್ ವಂಚನೆ ಪ್ರಕರಣ ಭೇದಿಸಿದ ದಿಲ್ಲಿ ಪೊಲೀಸ್: 12 ಮಂದಿ ವಶಕ್ಕೆ

0
21

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಫೋನ್ ವಿವರಗಳನ್ನು ಕದ್ದು ಬ್ಯಾಂಕಿನಿಂದ ಹಣ ಕಬಳಿಸಿದ 12 ಸದಸ್ಯರ ತಂಡ ಸೆರೆ ಸಿಕ್ಕಿದೆ. ದಿಲ್ಲಿ ಪೊಲೀಸ್ ಇವರನ್ನು ಬಂಧಿಸಿದೆ. ಹೀಗೆ ಬಂಧಿಸಲಾದವರು ಸಾವಿರದಷ್ಟು ಪ್ರಕರಣದ ಆರೋಪಿಗಳು ಎಂದು ಪೊಲೀಸರು ಹೇಳಿದರು.

ಝಾರ್ಕಂಡ್. ಬೆಂಗಳೂರು, ಪಶ್ಚಿಮ ಬಂಗಾಳದಿಂದ ಹನ್ನೆರಡು ಮಂದಿಯನ್ನು ಪೊಲೀಸರು ಬಂಧಿಸಿದರು. ನಕಲಿ ವೆಬ್‍ಸೈಟ್‍ಗಳ ಮೂಲಕ ಮಾಲ್‍ವೇರ್‌ಗಳ ಮೂಲಕ ಇವರು ವಂಚನೆ ನಡೆಸಿದ್ದಾರೆ ಎಂದು ಸೈಬರ್ ಸೆಲ್ ಅಧಿಕಾರಿ ತಿಳಿಸಿದರು. ಮಾಲ್‍ವೇರ್‌ಗಳನ್ನು ಫೋನ್‍ಗಳಲ್ಲಿ ಇನ್‍ಸ್ಟಾಲೇಶನ್ ಮಾಡಿ ಇದರ ಮೂಲಕ ಬ್ಯಾಂಕ್ ವಿವರ ಸೋರಿಕೆ ಮಾಡಿಕೊಂಡು ಈ ವಿವರಗಳನ್ನು ಉಪಯೋಗಿಸಿ ಒಟಿಪಿ ಸೋರಿಕೆ ಮಾಡುವುದರೊಂದಿಗೆ ಹಣ ಕಬಳಿಸುತ್ತಿದ್ದರು.

27.10 ಲಕ್ಷ ರೂಪಾಯಿ ಕಳಕೊಂಡ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬಹಿರಂವಾಗಿದ್ದೆಂದು ಪೊಲೀಸರು ತಿಳಿಸಿದರು.

ಬೆಂಗಳೂರಿನಿಂದ ಮುಹಮ್ಮದ್ ಮುಜಹಿದ್ ಅನಾರಿ, ಆಸಿಫ್ ಅನ್ಸಾರಿ, ಗುಲಾಬ್ ಅನ್ಸಾರಿ, ಶಾಹನಾಝ್ ಅನ್ಸಾರಿ, ಬಹರುದ್ದೀನ್ ಅನ್ಸಾರಿ, ಬಸರುದ್ದೀನ್ ಅನ್ಸಾರಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ದೇಶಾದ್ಯಂತ ಹರಡಿಕೊಂಡಿರುವ ದೊಡ್ಡ ತಂಡ ಇದೆಂದು ಪೊಲೀಸರು ತಿಳಿಸಿದರು. ಕೆಲವೊಮ್ಮೆ ಬಂಧಿಸಿದವರು ತಪ್ಪು ಮಾಹಿತಿ ನೀಡಿದ್ದರು. ತಂಡದ ಮುಖ್ಯ ಮುಸ್ಲಿಂ ಅನ್ಸಾರಿ ಎಂಬಾತನ್ನು ಹಲವು ಬಾರಿ ದಾಳಿ ಮಾಡಿದ ಬಳಿಕ ಪೊಲೀಸರು ಬಂಂಧಿಸಿದ್ದಾರೆ.

LEAVE A REPLY

Please enter your comment!
Please enter your name here