ದಿಲ್ಲಿಯಲ್ಲಿ ವಿಷಾನಿಲ ಸೋರಿಕೆ: ಐವರು ಆಸ್ಪತ್ರೆಗೆ ದಾಖಲು

0
21

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದಿಲ್ಲಿಯ ಆರ್‌ಕೆ ಪುರಂ ಏಕತಾ ವಿಹಾರಿನ ಸಮೀಪದಲ್ಲಿ ವಿಷಾನಿಲ ಸೋರಿಕೆಯಾಗಿದ ಘಟನೆ ನಡೆದಿದೆ. ವಿಷಾನಿಲದ ಪ್ರಭಾವದಿಂದ ಕಣ್ಣಿನ ತುರಿಕೆಗೆ ಒಳಗಾದ ಐವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ನಿನ್ನೆ ರಾತ್ರೆ ಈ ಘಟನೆ ನಡೆದಿದ್ದು, ವಿಷಾನಿಲ ಸೋರಿಕೆ ಎಲ್ಲಿಂದ ಆಗಿದೆ ಎಂಬುದು ಸ್ಪಷ್ಟವಾಗಿಲ್ಲ. ಘಟನಾ ಸ್ಥಳದಲ್ಲಿ ಆಂಬುಲೆನ್ಸ್ ಅಗ್ನಿಶಾಮಕ ದಳದೊಂದಿಗೆ, ದಿಲ್ಲಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಥಾರಿಟಿ ತಲಪಿತ್ತಾದರೂ ಆದರೂ ವಿಷಾನಿಲ ಸೋರಿಕೆಯ ಮೂಲ ನೀಗೂಢವಾಗಿಯೇ ಉಳಿದಿದೆ.

ಏಕತಾ ವಿಹಾರದ ಪರಿಸರದಲ್ಲಿ ಗ್ಯಾಸ್ ಸಿಲಿಂಡರಿಂದ ಬೆಂಕಿ ಹರಡಿಲ್ಲ. ಈಗಿನ ಪರಿಸ್ಥಿತಿ ನಿಯಂತ್ರಿತವಾಗಿದೆ ಎಲ್ಲ ಸುರಕ್ಷಾ ಕ್ರಮಗಳನ್ನು ಜರಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

LEAVE A REPLY

Please enter your comment!
Please enter your name here