ಗೌರಿ ಲಂಕೇಶ್, ಧಾಬೋಲ್ಕರ್, ಕಲಬುರಗಿ, ಪನ್ಸಾರ್ ಹತ್ಯೆಯಲ್ಲಿ ಪರಸ್ಪರ ಸಂಬಂಧವಿದೆ

0
147

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ.19: ವಿಚಾರವಾದಿ ನರೇಂದ್ರ ದಾಭೋಲ್ಕರ್, ಸಿಪಿಐ ನಾಯಕ ಗೊವಿಂದ್ ಪನ್ಸಾರೆ, ಆಕ್ಟಿವಿಸ್ಟ್ ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಎಂಎಂ ಕಲಬುರಗಿಯವರ ಕೊಲೆಯಲ್ಲಿ ಪರಸ್ಪರ ಲಿಂಕ್‍ಗಳಿವೆ ಎಂದು ನರೇಂದ್ರ ಧಾಬೊಲ್ಕರ್ ರ ಮಗಳು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ನರೇಂದ್ರ ಧಾಬೊಲ್ಕರ್ ಕೊಲೆಗೆ ಸಂಬಂಧಿಸಿದ ತನಿಖೆಯ ಮೇಲ್ನೋಟ ವಹಿಸಬೇಕೆಂದು ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟು ತಳ್ಳಿ ಹಾಕಿತ್ತು. ಇದರ ವಿರುದ್ಧ ಅವರ ಮಗಳು ಮುಕ್ತ ಧಾಬೋಲ್ಕರ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ತನ್ನ ವಾದವನ್ನು ತಿಳಿಸಿದ್ದಾರೆ.

ನರೇಂದ್ರ ಧಾಬೊಲ್ಕರ್ ರ ಕೊಲೆಗೆ ಸಂಬಂಧಿಸಿದ ತನಿಖೆಯ ಮೇಲ್ನೋಟ ವಹಿಸಬೇಕೆಂದು ಸುಪ್ರೀಂಕೋರ್ಟಿನ ಪೀಠದ ಮುಂದೆ ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತಿರುವ ಹೆಚ್ಚುವರಿ ದಾಖಲೆ ಸಲ್ಲಿಸಲು ಅರ್ಜಿದಾರರ ವಕೀಲ ಆನಂದ್ ಗ್ರೋವರಿಗೆ ಜಸ್ಟಿಸ್ ಸಂಜಯ್ ಕಿಶನ್‍ಕೌಲ್ ಅಧ್ಯಕ್ಷತೆಯ ಪೀಠ ಎರಡು ವಾರಗಳ ಸಮಯ ನೀಡಿದೆ. ಜೊತೆಗೆ ಸಿಬಿಐ ವಕೀಲ ಅಡಿಷನಲ್ ಸಾಲಿಸಟರ್ ಜನರಲ್ ಐಶ್ವರ್ಯ ಭಾಟಿಗೆ ನೀಡಬೇಕೆಂದು ಸೂಚಿಸಿತು.

ಧಾಬೋಲ್ಕರ್ ರನ್ನು 2013 ಆಗ್ಟ್ 20ಕ್ಕೆ ಪುಣೆಯಲ್ಲಿ ಅವರು ಮಾರ್ನಿಂಗ್ ವಾಕಿಂಗ್ ನಡೆಸುತ್ತಿದ್ದ ಸಮಯದಲ್ಲಿ ಇಬ್ಬರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಗುಂಡು ಹಾರಿಸಿ ಕೊಲೆ ಮಾಡಿದ್ದರು. 2015 ಫೆಬ್ರವರಿ 20ಕ್ಕೆ ಪನ್ಸಾರ್ ಹತ್ಯೆ ಯಾಗಿದ್ದರು. 2017ಕ್ಕೆ ಗೌರಿ ಲಂಕೇಶ್‍ರನ್ನು ಮತ್ತು 2015ಕ್ಕೆ ಕಲಬುರಗಿಯವರ ಕೊಲೆ ನಡೆದಿತ್ತು.