ರಾಜ್ಯ ಸಭೆ| ಸಂಸದರಲ್ಲಿ 27 ಮಂದಿ ಶತಕೋಟ್ಯಾಧಿಪತಿಗಳು, ಗಂಭೀರ ಕ್ರಿಮಿನಲ್ ಅಪರಾಧಿಗಳ ಸಂಖ್ಯೆ 41, ಇಬ್ಬರು ಕೊಲೆ ಆರೋಪಿಗಳು

0
137

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ.19: ರಾಜ್ಯಸಭಾ ಸಂಸದರ ಕುರಿತು ಅಸೋಸಿಯೇಶನ್ ಫಾರ್ ಡೆಮೊಕ್ರಾಟಿಕ್ ರಿಫಾಂಸ್ ಅದ್ಯಯನದಲ್ಲಿ ರಾಜ್ಯ ಸಭೆಯ 223 ಸಂಸದರಲ್ಲಿ 27 ಮಂದಿ ಶತಕೋಟ್ಯಾಧಿಪತಿಗಳು, ಆಂಧ್ರದ ಹನ್ನೊಂದು ಸದಸ್ಯರಲ್ಲಿ ಐವರು(45 ಶೇಕಡ) ಶತಕೋಟ್ಯಾಧಿಪತಿಗಳು , ತೆಲಂಗಾಣದ ಏಳು ರಾಜ್ಯಸಭಾ ಸದಸ್ಯರು(ಶೇ.43) ಶತಕೋಟ್ಯಾಧಿಪತಿಗಳು, ತೆಲಂಗಾಣದ ಏಳು ರಾಜ್ಯಸಭಾ ಸದಸ್ಯರ ಒಟ್ಟು ಆಸ್ತಿ 5596 ಕೋಟಿ ರೂಪಾಯಿ ಆಗಿದೆ. ಆಂಧ್ರದ ಹನ್ನೊಂದು ಮಂದಿ ಸದಸ್ಯರ ಒಟ್ಟು ಆಸ್ತಿ 3823 ಕೋಟಿಯಾಗಿದೆ. ಉತ್ತರ ಪ್ರದೇಶದ ಮೂವತ್ತು ರಾಜ್ಯಸಭಾ ಸದಸ್ಯರ ಆಸ್ತಿ 1941 ಕೋಟಿ ರೂಪಾಯಿ ಆಗಿದೆ. ತೆಲಂಗಾಣದಿಂದ ಟಿಆರ್ ಎಸ್ ಸಂಸದ ಬಂಡಿ ಪಾರ್ಥಸಾಥು ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ಆಸ್ತಿ 5300 ಕೋಟಿ ರೂಪಾಯಿ , ಆಂಧ್ರ ವೈಎಸ್‍ಆರ್‍ಇಪಿಯ ಅಯೋಧ್ಯ ರಾಮಿ ರೆಡ್ಡಿಯ ಆಸ್ತಿ 2577 ಕೋಟಿ ರೂಪಾಯಿಯಾಗಿದೆ. 1001 ಕೋಟಿ ರೂಪಾಯಿ ಆಸ್ತಿ ಜಯ ಬಚ್ಚನ್‍ರಿಗಿದ್ದು ಅವರು ಮೂರನೇ ಸ್ಥಾನದಲ್ಲಿದ್ದಾರೆ. ಕೇರಳದ ಪಿವಿ ಅಬ್ದುರ್ರಹ್ಮಾನ್‍ರ ಆಸ್ತಿ 242 ಕೋಟಿ ರೂಪಾಯಿಯಾಗಿದೆ.

ರಾಜ್ಯ ಸಭೆಯ 41 ಸಂಸದರ ಮೇಲೇ ಗಂಭೀರ ಕ್ರಿಮಿನಲ್ ಕೇಸುಗಳಿವೆ. ಇಬ್ಬರ ಮೇಲೆ ಕೊಲೆ ಪ್ರಕರಣ ಇದೆ. ನಾಲ್ವರು ರಾಜ್ಯಸಭಾ ಸದಸ್ಯರು ಮಹಿಳೆಯರ ಕುರಿತು ಕೇಸುಗಳನ್ನು ಹೊಂದಿದ್ದಾರೆ.