SIO ದ.ಕ. ಜಿಲ್ಲೆಯ ನೂತನ ಅಧ್ಯಕ್ಷರಾಗಿ ದಾನಿಶ್ ಚೆಂಡಾಡಿ ಆಯ್ಕೆ

0
529

ಸನ್ಮಾರ್ಗ ವಾರ್ತೆ

ಮಂಗಳೂರು: ರಾಷ್ಟ್ರಮಟ್ಟದ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್.ಐ.ಓ) ನ 2021 ನೇ ಸಾಲಿನ ದ.ಕ. ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ದಾನಿಶ್ ಚೆಂಡಾಡಿ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಹಿದಾಯತ್ ಸೆಂಟರ್‌ನಲ್ಲಿ ನಿನ್ನೆ ಎಸ್.ಐ.ಓ ಕರ್ನಾಟಕ ರಾಜ್ಯಾಧ್ಯಕ್ಷ ಶೆಹಝಾದ್ ಶಕೀಬ್ ಮುಲ್ಲಾ ರವರ ಉಸ್ತುವಾರಿಯಲ್ಲಿ ನಡೆದ ಚುನಾವಣೆಯಲ್ಲಿ ಎಮ್. ದಾನಿಶ್ ರವರು ನೂತನ ದ.ಕ. ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಎಸ್‌.ಐ.ಓ. ರಾಜ್ಯ ಕಾರ್ಯದರ್ಶಿ ನಾಸಿರ್ ಹೂಡೆ ಹಾಗೂ ಎಸ್‌ಐಓ ನಿರ್ಗಮನ ಜಿಲ್ಲಾಧ್ಯಕ್ಷ ಅಶೀರುದ್ದೀನ್ ಆಲಿಯಾ ಉಪಸ್ಥಿತರಿದ್ದರು.

ಪಾಣೆಮಂಗಳೂರು ಸಮೀಪದ ಬೋಳಂಗಡಿಯ ನಿವಾಸಿಯಾಗಿರುವ ಇವರು, ಮಂಗಳೂರಿನ ರೋಶನಿ ನಿಲಯ ಕಾಲೇಜಿನಲ್ಲಿ ಬಿ.ಎಸ್‌.‌ ಡಬ್ಲ್ಯೂ ಹಾಗೂ ಉಜಿರೆಯ ಎಸ್ ಡಿ ಎಂ ನಲ್ಲಿ ಎಂ.ಸಿ.ಜೆ(ಮಾಸ್ ಕಮ್ಯುನಿಕೇಷನ್ & ಜರ್ನಲಿಸಂ) ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಕಳೆದ ಬಾರಿ ಎಸ್ ಐ ಓ ನ ರಾಜ್ಯ ಸಾಂಸ್ಕೃತಿಕ ವಿಭಾಗದ ಸಂಚಾಲಕ ಹಾಗೂ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಯುವ ಸಾಹಿತಿಯಾಗಿಯೂ ಗುರುತಿಸಿಕೊಂಡಿರುವ ಇವರು, ಗರಿಗೆದರಿದ ಕೊಡೆ(ಕವನ ಸಂಕಲನ), ಪುಷ್ಪಧ್ವನಿ ಹಾಗೂ ಬಹುಚರ್ಚಿತ ಕಾಡಿಗೊಂದು ಕಿಟಕಿ ಎಂಬ ಕಾದಂಬರಿ ಕೂಡಾ ಬರೆದಿದ್ದಾರೆ.

ಎಸ್‌ಐಓ ದ.ಕ‌. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಫ್ಹಾಮ್ ಉಳ್ಳಾಲ, ಸಂಘಟನಾ ಕಾರ್ಯದರ್ಶಿಯಾಗಿ ರಿಝ್ವಾನ್ ಅಝ್ಹರಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಝಮೀರ್ ಪಕ್ಕಲಡ್ಕ ಹಾಗೂ ಮಾಧ್ಯಮ ಕಾರ್ಯದರ್ಶಿಯಾಗಿ ಇರ್ಷಾದ್ ವೇಣೂರು ಅವರನ್ನು ಆಯ್ಕೆ ಮಾಡಲಾಯಿತು.

ಎಸ್‌ಐಓ ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾಗಿ ಮುತಹ್ಹರ್ ಬೋಳಂಗಡಿ, ಮಂಗಳೂರು ನಗರಾಧ್ಯಕ್ಷರಾಗಿ ಸಲ್ಮಾನ್ ಕುದ್ರೋಳಿ, ಕಾರ್ಯದರ್ಶಿಯಾಗಿ ಇಜಾಝ್ ಅಹ್ಮದ್ ಕುದ್ರೋಳಿಯವರನ್ನು ಆಯ್ಕೆ ಮಾಡಲಾಯಿತು‌.